ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

arrest
Published on

ಕೊಳ್ಳೇಗಾಲ: ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡ ಮಂತ್ರವಾದಿಯೊಬ್ಬ ಮಹಿಳೆಯ ಹಣೆಗೆ ಕಪ್ಪಿಟ್ಟು ಲಕ್ಷಾಂತರ ಹಣ ಮತ್ತು ಚಿನ್ನಾಭಾರಣ ದೋಚಿದ್ದಾನೆ.

ಇಂತಹ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ. ಮಂತ್ರವಾದಿ ಮಾತು ನಂಬಿ ಮೋಸ ಹೋದಾಕೆ ಹೆಸರು ಭವ್ಯ. ಭವ್ಯಾ ಅವರಿಗೆ ಇತ್ತೀಚಿಗೆ ಅನಾರೋಗ್ಯ ತೀವ್ರವಾಗಿ ಕಾಡುತ್ತಿದೆ. ಈ ಬಗ್ಗೆ ಜಿನಕನಹಳ್ಳಿ ಗ್ರಾಮದ ಮಂತ್ರವಾದಿ ಮಹದೇವಸ್ವಾಮಿ ಎಂಬಾತನ ಬಳಿ ಭವ್ಯ ಅಳಲು ತೋಡಿಕೊಂಡಿದ್ದಾರೆ. ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ. ಪೂಜೆ ಮಾಡಿಸಿದರೆ ಎಲ್ಲವೂ ಸರಿ ಹೋಗಲಿದೆ ಎಂದು ನಂಬಿಸಿದ್ದಾನೆ.

ಮಂತ್ರವಾದಿಯ ಮಾತು ನಂಬಿದ ಭವ್ಯಾ ಪೂಜೆ ಮಾಡಿಸಲು ಒಪ್ಪಿದ್ದಾರೆ. ಅದರಂತೆ 2021ರ ಆಗಸ್ಟ್ 9ರ ರಾತ್ರಿ ಭವ್ಯಾರ ಮನೆಗೆ ಬಂದ ಮಂತ್ರವಾದಿ ಕುಡಿಕೆ ಇಟ್ಟು ಪೂಜೆ ಮಾಡಬೇಕಿದೆ ಇದರಲ್ಲಿ ಒಡವೆ, ನಗದು ಇಡುವಂತೆ ಸೂಚಿಸಿದ್ದಾನೆ. ಭವ್ಯಾ ಮನೆಯಲ್ಲಿದ್ದ 2 ಲಕ್ಷ ರೂ‌. ಮೌಲ್ಯದ ಚಿನ್ನಾಭರಣ ಮತ್ತು 2.5 ಲಕ್ಷ ರೂ. ನಗದು ಇಟ್ಟಿದ್ದಾರೆ. ಪೂಜೆ ಮಾಡುತ್ತಲೇ ಭವ್ಯಾರ ಹಣೆ ಮಂತ್ರವಾದಿ ಕಪ್ಪಿಟ್ಟಿದ್ದೇ ತಡ ಅವರು ಮೂರ್ಛೆ ಹೋಗಿದ್ದಾರೆ. ಬಳಿಕ ಕುಡಿಕೆಯಲ್ಲಿದ್ದ ಚಿನ್ನ ಮತ್ತು ಹಣ ಲಪಟಾಯಿಸಿ ಮಂತ್ರವಾದಿ ಎಸ್ಕೇಪ್​ ಆಗಿದ್ದ.

ಹಣ-ಚಿನ್ನ ಕಳೆದುಕೊಂಡ ಮಹಿಳೆ ಕಳೆದ ಜ.1ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್​ ಠಾಣೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net