ಚಿಕ್ಕಮ್ಮನ ಜತೆ ಮಗನ ಲವ್ವಿಡವ್ವಿ! ಕಲಬುರಗಿಯಲ್ಲಿ ನಡೆದೇ ಹೋಯ್ತು ಘೋರ ದುರಂತ

murder case
Published on

ಕಲಬುರಗಿ: ಜ.25ರಂದು ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿ ಮೇಲೆ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಫೋಟೋಗ್ರಾಫರ್ ಶಿವಕುಮಾರ್ ಶವದ ಜಾಡು ಹಿಡಿದ ಹೊರಟ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಸ್ವಂತ ಚಿಕ್ಕಮ್ಮನ ಮನಗನಿಂದಲೇ ಶಿವಕುಮಾರ್​ ಹತ್ಯೆಯಾಗಿದ್ದು, ಕೊಲೆಯ ಕಾರಣ ಬೆಚ್ಚಿಬೀಳಿಸುತ್ತೆ.

ಶಿವಕುಮಾರ್​ರ ಚಿಕ್ಕಮ್ಮನ ಮಗ ಮಹಾಂತೇಶ್ ಆಳಂದಕರ್ ಕೊಲೆ ಆರೋಪಿ. ಈತನ ದೊಡ್ಡಪ್ಪನ ಮಗ ಶಿವಕುಮಾರ್​. ಫೋಟೋಗ್ರಾಫರ್ ಆಗಿದ್ದ ಶಿವಕುಮಾರ್​, ಮಹಾಂತೇಶ್​ನ ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಕಣ್ಣಾರೆ ಕಂಡಿದ್ದ ಆಕೆಯ ಮಗ ಮಹಾಂತೇಶ್, ತನ್ನ ಮಾವ ಬಸವರಾಜ್ ಜತೆ ಸೇರಿಕೊಂಡು ಸಹೋದರ ಶಿವಕುಮಾರ್​ನ ಹತ್ಯೆಗೆ ಸಂಚು ರೂಪಿಸಿದ್ದ.

ಅದರಂತೆ ಜ.25ರಂದು ಆಳಂದ ತಾಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್​ನನ್ನು ಮಹಾಂತೇಶ್ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದ. ಮಾರ್ಗದಲ್ಲಿ ಶಿವಕುಮಾರ್​ನ ರುಂಡ ಕತ್ತರಿಸಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಗೆ ಎಸೆದು ಪರಾರಿಯಾಗಿದ್ದರು. ಈ ಕೃತ್ಯಕ್ಕೆ ಮಹಾಂತೇಶ್​ಗೆ ಸಹಕರಿಸಿದ ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಮತ್ತು ಅಶೋಕ ಜಮಾದಾರ್ ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net