ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ಕಂಡು ಬೆಚ್ಚಿದ ಟೆಕ್ಕಿ! ಬೆಂಗಳೂರಲ್ಲಿ ಗೆಳತಿ ಜತೆ ಕಳೆದ ಖಾಸಗಿ ಕ್ಷಣ ಬಯಲಾಗಿದ್ದೇಗೆ?

Porn
Published on

ಬೆಂಗಳೂರು: ಟೆಕ್ಕಿಯೊಬ್ಬ ಪೋರ್ನ್​ ವೆಬ್​ಸೈಟ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದಾಗ "ತನ್ನ ಗೆಳತಿಯ ಜತೆ ತಾನು ಕಳೆದ ಖಾಸಗಿ ಕ್ಷಣದ ವಿಡಿಯೋ'' ಕಂಡು ನಿಬ್ಬೆರಗಾಗಿದ್ದಾನೆ. ತನ್ನ ಖಾಸಗಿ ಕ್ಷಣವನ್ನ ಸೆರೆ ಹಿಡಿದಿದ್ದಾರು? ಅಪ್​ಲೋಡ್​ ಮಾಡಿದ್ದಾರು? ಎಂದು ಗೊತ್ತಿಲ್ಲದೆ ಕಂಗೆಟ್ಟ ಯುವಕ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಪ್ರತಿಷ್ಠಿತ ಕಂಪನಿಯಲ್ಲಿ ಸ್ಟಾಫ್ಟ್​​ವೇರ್​ ಇಂಜಿನಿಯರ್​ ಆಗಿರುವ ಆಸ್ಟಿನ್​ ಟೌನ್​ನ ನಿವಾಸಿ 25 ವರ್ಷದ ಯುವಕ, ತನ್ನ ಗೆಳತಿ ಜತೆ ಬೆಂಗಳೂರಿನ ಹೋಟೆಲ್​ವೊಂದರಲ್ಲಿ ದೈಹಿಕ ಸಂಪರ್ಕ ನಡೆಸಿದ್ದ. ಟೆಕ್ಕಿಯ ಗಮನಕ್ಕೆ ಬಾರದಂತೆ ಆ ದೃಶ್ಯಗಳನ್ನು ಯಾರೋ ಕಿಡಿಗೇಡಿಗಳು ಸೆರೆ ಹಿಡಿದು, ವಿವಿಧ ಅಶ್ಲೀಲ ವೆಬ್​ಸೈಟ್​ಗಳಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಜ.21ರಂದು ಆ ಯುವಕ ಅಶ್ಲೀಲ ವೆಬ್​ಸೈಟ್​ನಲ್ಲಿ ಪೋರ್ನ್​ ವಿಡಿಯೋ ವೀಕ್ಷಣೆ ಮಾಡುತ್ತಿದ್ದಾಗ "ತನ್ನ ಗೆಳತಿ ಜತೆ ದೈಹಿಕ ಸಂಪರ್ಕ ನಡೆಸಿದ ವಿಡಿಯೋ ಕಂಡು ಬಂದಿತ್ತು.

ಆತಂಕಗೊಂಡು ಬೇರೆ ಪೋರ್ನ್​ ವೆಬ್​ಸೈಟ್​ ಪರಿಶೀಲಿಸಿದಾಗ ಅದರಲ್ಲೂ ಆತನ ವಿಡಿಯೋ ಅಪ್​ಲೋಡ್​ ಆಗಿರುವುದು ಕಂಡು ಬಂದಿದೆ. ಅರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿಭಾಗದ ಸಿಇಎನ್​ ಪೊಲೀಸ್​ ಠಾಣೆಗೆ ಟೆಕ್ಕಿ ದೂರು ನೀಡಿದ್ದಾನೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಚಿತ್ರೀಕರಿಸಿ ಅಪ್ಲೋಡ್​ ಮಾಡಿರುವ ಸಾಧ್ಯತೆಗಳಿವೆ ಎಂದು ಯುವಕ ದೂರಿನಲ್ಲಿ ಆರೋಪಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net