ಚಾಮರಾಜನಗರದಲ್ಲಿ ಅಪಘಾತ: ಇಬ್ಬರ ಸ್ಥಿತಿ ಗಂಭೀರ, ಮಾಜಿ ಶಾಸಕರ ಪ್ರಾಣ ಉಳಿಸಿದ ಏರ್​ಬ್ಯಾಗ್

balaraju car accident
Published on

ಚಾಮರಾಜನಗರ: ತಾಲೂಕಿನ ಬಾಣಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಕೊಳ್ಳೇಗಾಲ ಮಾಜಿ ಶಾಸಕ ಎಸ್.ಬಾಲರಾಜು ಸೇರಿ ಮೂವರು ಗಾಯಗೊಂಡಿದ್ದಾರೆ.

ಬಾಲರಾಜು ತೆರಳುತ್ತಿದ್ದ ಕಾರು ಮತ್ತು ಅಶೋಕ ಲೈಲ್ಯಾಂಡ್ ಗಾಡಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲರಾಜು ಮತ್ತು ಅವರ ಕಾರು ಚಾಲಕ ಮೋಹನ್ ಕಾಲಿಗೆ ಪೆಟ್ಟು ಬಿದ್ದಿದೆ. ಇವರ ಕಾರಿಗೆ ಡಿಕ್ಕಿ ಹೊಡೆದ ವಾಹನದ ಚಾಲಕ ಮತ್ತು ಕ್ಲೀನರ್​ನ ಸ್ಥಿತಿ ಗಂಭೀರವಾಗಿದೆ. ನಾಲ್ವರು ಗಾಯಾಳುಗಳನ್ನೂ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಬಾಲರಾಜು ಬುಧವಾರ ರಾತ್ರಿ ಯಳಂದೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಬಾಣಳ್ಳಿ ಗೇಟ್ ಬಳಿ ಅಪಘಾತವಾಗಿದೆ. ಬಾಲರಾಜು ಅವರ ಕಾರಿನಲ್ಲಿ ಏರ್ ಬ್ಯಾಗ್ ಇದ್ದದ್ದರಿಂದ ಅವರಿಗೆ ಮತ್ತು ಅವರ ಕಾರು ಚಾಲಕನಿಗೆ ಹೆಚ್ಚು ಪೆಟ್ಟು ಬಿದ್ದಿಲ್ಲ. ಆದರೆ ಅಶೋಕ ಲೈಲ್ಯಾಂಡ್ ಗಾಡಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್​ಗೆ ತೀವ್ರ ಗಾಯಗಳಾಗಿರುವುದಾಗಿ ಎಂದು ತಿಳಿದುಬಂದಿದೆ.

ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಂತೇಮರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net