'ಶ್ರೀನಿವಾಸಪುರದ ಮಹಾನಾಯಕ'ನೇ ಸಿದ್ದುಗೆ ಕಿವಿಯೂದಿ ಮೈತ್ರಿ ಸರ್ಕಾರದ ಕತೆ ಮುಗಿಸಿದ್ದು: ಎಚ್​ಡಿಕೆ ವಾಗ್ದಾಳಿ

hdk siddaramaiah rameshkumar
Published on

ಕೋಲಾರ: ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರದ ಪತನಕ್ಕೆ ಗೋಸುಂಬೆ ರಾಜಕಾರಣಿಯೇ ಕಾರಣ. 'ಶ್ರೀನಿವಾಸಪುರದ ಮಹಾನಾಯಕ' ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್​ ಅನ್ನು ಟೀಕಿಸುತ್ತ ಬಂದಿದ್ದ ಕಾಂಗ್ರೆಸ್​ನ ಸಿದ್ದರಾಮಯ್ಯಗೆ ಗೋಸುಂಬೆ ರಾಜಕಾರಣಿ ರಮೇಶ್​ಕುಮಾರ್​ ಕಿವಿಯೂದಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದರು ಎಂದು ಕೋಲಾರದಲ್ಲಿ ಭಾನುವಾರ ಎಚ್​ಡಿಕೆ ಆಕ್ರೋಶ ಹೊರಹಾಕಿದರು.

'ಶ್ರೀನಿವಾಸಪುರದ ಮಹಾನಾಯಕ' ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು. ಇವರ ಕಾರಣದಿಂದಾಗಿಯೇ ಬಿಜೆಪಿ ಸರ್ಕಾರ ಆಡಳಿತ ನಡೆಸುವಂತಾಯಿತು. ಕೋಲಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ 7 ಬಾರಿ ಗೆದ್ದಿದ್ದ ದಲಿತ ನಾಯಕ ಕೆ.ಎಚ್​.ಮುನಿಯಪ್ಪ ಅವರ ರಾಜಕೀಯ ಭವಿಷ್ಯ ಮುಗಿಸಿದ ಕೀರ್ತಿಯೂ ರಮೇಶ್​ ಕುಮಾರ್​ಗೆ ಸಲ್ಲಬೇಕು ಎಂದು ಕುಮಾರಸ್ವಾಮಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net