ದೇವೇಗೌಡರಿಗೆ ಹತ್ತಿರದಲ್ಲೇ ಇದೆ ನಾಲ್ಕರ ಮೇಲೆ ಹೋಗೋದು... ಕೆ.ಎನ್​. ರಾಜಣ್ಣರಿಂದ ಇದೆಂಥಾ ಮಾತು?

devegowda knrajanna
Published on

ತುಮಕೂರು: 'ದೇವೇಗೌಡರು ಇಬ್ಬರ ಮೇಲೆ ಹಾಕ್ಕೊಂಡು ಹೋಗ್ತಾವ್ರೇ.. ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು...' ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಕ್ಷೇತ್ರದಲ್ಲೇ ಇವರ ಮಾತಿಗೆ ವಿರೋಧ ವ್ಯಕ್ತಬವಾಗುತ್ತಿದೆ. ರಾಜಣ್ಣ ಅವರಿಂದ ಇಂಥಾ ಮಾತು ನಿರೀಕ್ಷಿಸಿರಲಿಲ್ಲ. ಹಿರಿಯ ಮುತ್ಸದ್ಧಿ ಬಗ್ಗೆ ನಾಲಗೆ ಹರಿಯಬಿಟ್ಟಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ.ಎನ್​.ರಾಜಣ್ಣ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. 'ದೇವೇಗೌಡರು ಇಬ್ಬರ ಮೇಲೆ ಹಾಕ್ಕೊಂಡು ಹೋಗ್ತಾವ್ರೇ..(ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹೇಳಿದ ಮಾತು) ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು... ಇದು ನನ್ನ‌ ಕೊನೇ ಚುನಾವಣೆ. ಶೋಕಿಗೆ, ಮುಖಸ್ಥುತಿಗೆ ರಾಜಕಾರಣ ಮಾಡೋದು ಬೇಡ..' ಎಂದು ಹೇಳಿದ್ದಾರೆ.

'ನಾನು ಎಂಎಲ್ಎ ಆದರೆ ನೀವೆಲ್ಲರೂ ಶಾಸಕರು ಇದ್ದಂತೆ. ನೀವು ಹೋರಾಟ ಮಾಡಿ, ನಾನು ಎಂಎಲ್ಎ ಆದರೆ ಸುಮ್ಮನೆ ನಾಮ್​ಕೆವಸ್ತೆಗೆ ಇರ್ತೀನಿ. ಏನಾದ್ರೂ ಕೆಲಸ ಆಗಬೇಕಾದ್ರೆ ನೀವೇ ಅಧಿಕಾರಿಗಳನ್ನ ಕೇಳೋ ಶಕ್ತಿ ನಿಮಗೆ ಬರುತ್ತೆ. ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ಓಟ್ ಕೇಳ್ತೀನಿ. ಇದು ನನ್ನ ಕೊನೇ ಎಲೆಕ್ಷನ್, ಮುಂದೆ ನೀವು ನಿಂತ್ಕೋ ಅಂದ್ರೂ ನಿಲ್ಲಲ್ಲಾ... ನನಗೆ ಆಗಲೇ 72 ವರ್ಷ, 77 ಆದ್ರೆ ಕೈಕಾಲು ಅಲಾಡ್ತಿರುತ್ತೆ. ನಮ್ಮ ಸರ್ಕಾರ ಬಂದ್ರೆ ನೂರಕ್ಕೆ ನೂರರಷ್ಟು ಮಂತ್ರಿ ಆಗ್ತೀನಿ. ದೇವೇಗೌಡರು ಇಬ್ಬರು ಮೇಲೆ ಹಾಕ್ಕೊಂಡು ಹೋಗ್ತಾವ್ರೇ.. ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು' ಎಂದು ರಾಜಣ್ಣ ಹೇಳಿದ್ದಾರೆ.

ಅದ್ಹೇನೆ ಇರಲಿ ದೇವೇಗೌಡರ ಬಗ್ಗೆ ರಾಜಣ್ಣ ಹಗುರವಾಗಿ ಮಾತಾಡಿದ್ದು ಸರಿ ಇಲ್ಲ. ಅವರು ಕ್ಷಮೆಯಾಚಿಸಬೇಕು ಎಂಬ ಚರ್ಚೆ ಕ್ಷೇತ್ರದಲ್ಲಿ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net