

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನವದೆಹಲಿಯ ರೌಸ್ ಅವೆನ್ಯೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಾಣ್, ಆಂಜನೇಯ, ಸುನೀಲ್ ಶರ್ಮ, ರಾಜೇಂದ್ರ ಶುಕ್ರವಾರ ಬೆಳಗ್ಗೆ ಹಾಜರಾಗಿದ್ದರು. ಜಾಮೀನು ಅರ್ಜಿ ವಿಚಾರಣೆಯನ್ನ ಜುಲೈ 30ಕ್ಕೆ ಕೋರ್ಟ್ ಮುಂದೂಡಿದ್ದು, ಡಿಕೆಶಿಗೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅತ್ತ ಜು.30ಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಇಡಿ ತಯಾರಿ ನಡೆಸಿದೆ.
2018ರಲ್ಲಿ ದೆಹಲಿಯ ಸಪ್ತರ್ ಜಂಗ್ ಫ್ಲ್ಯಾಟ್ನಲ್ಲಿ ಎಂಟೂವರೆ ಕೋಟಿ ರೂಪಾಯಿ ಹಣ ಸಿಕ್ಕಿರುತ್ತೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 800 ಕಡೆ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಹೆಚ್ಚು ಬ್ಯಾಂಕ್ಗಳಲ್ಲಿ 317ಕ್ಕೂ ಹೆಚ್ಚು ಅಕೌಂಟ್ನಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಮಗಳ ಹೆಸರಲ್ಲಿ 108 ಕೋಟಿ ಅಕ್ರಮ ವ್ಯವಹಾರ ಮಾಡಿದ್ದಾರೆ. ಪುತ್ರಿ ಹೆಸರಲ್ಲಿ 48 ಕೋಟಿ ಸಾಲ ಇದೆ. ಆದರೆ ಸಾಲದ ಮೂಲ ಮತ್ತು ಹಣದ ಮೂಲವನ್ನ ತಿಳಿಸಿಲ್ಲ... ದೆಹಲಿಯಲ್ಲಿ ಸಿಕ್ಕಂತಹ 8.5 ಕೋಟಿ ಹಣಕ್ಕೂ ಲೆಕ್ಕ ಕೊಟ್ಟಿಲ್ಲ... ಎಂಬ ಆರೋಪ ಡಿಕೆಶಿ ಮೇಲಿದೆ.
ಈ ಹಿಂದೆ ಅನಾರೋಗ್ಯದ ಕಾರಣ ನೀಡಿ ಡಿಕೆಶಿ ಜಾಮೀನು ಪಡೆದಿದ್ದರು. ಇದೀಗ ಹೊಸದಾಗಿ ರೆಗ್ಯುಲರ್ ಬೇಲ್ಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನ ಜುಲೈ 30ಕ್ಕೆ ಕೋರ್ಟ್ ಮುಂದೂಡಿದ್ದು, ಡಿಕೆಶಿಗೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅತ್ತ ಜು.30ಕ್ಕೆ ಲಿಖಿತ ಆಕ್ಷೇಪಣೆಯನ್ನ ಇಡಿ ಸಲ್ಲಿಸುತ್ತೆ.