ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್! ಉತ್ತರ ಕನ್ನಡದಲ್ಲಿ ವಿಚಿತ್ರ ಪ್ರಕರಣ ಬೇಧಿಸಿದ ಪೊಲೀಸರು

kidnap
Published on

ಉತ್ತರ ಕನ್ನಡ: ಕೊಟ್ಟ ಹಣ ವಾಪಸ್ ಪಡೆಯುವ ಸಲುವಾಗಿ ಅಜ್ಜನೇ ಮೊಮ್ಮಗನನ್ನು ಕಿಡ್ನ್ಯಾಪ್ ಮಾಡಿಸಿದ ಪ್ರಕರಣ ಭಟ್ಕಳದಲ್ಲಿ ನಡೆದಿದೆ.

ಆಜಾದ್ ನಗರದ 8 ವರ್ಷದ ಬಾಲಕನನ್ನು ಆ.20ರ ರಾತ್ರಿ ಅಪಹರಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಭಟ್ಕಳ ಠಾಣೆ ಪೊಲೀಸರು ಇಂದು(ಸೋಮವಾರ) ಬೆಳಗ್ಗೆ ಬಾಲಕನನ್ನು ಗೋವಾ ಕಲ್ಲಂಗುಟಗಗನ ಕೋಣೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕನ್ ಅಂಗಡಿ ನಡೆಸುತ್ತಿದ್ದ ಭಟ್ಕಳ ಬದ್ರಿಯಾ ನಗರದ ಅನೀಸ್ ಬಾಷಾ ಎಂಬಾತನನ್ನು ಬಂಧಿಸಲಾಗಿದೆ. ಬಾಲಕನನ್ನು ಸುರಕ್ಷಿತವಾಗಿ ಕುಂಟುಂಬಕ್ಕೆ ಒಪ್ಪಿಸಲಾಗಿದೆ. ಅಜ್ಜನೇ ಆರೋಪಿ ಎಂದು ಗೊತ್ತಾಗಿದೆ.

ಅಜ್ಜನೇ ಆರೋಪಿ: ಬಾಲಕನ ತಾಯಿಯ ಮಾವ ಹಾಗೂ ಆತನ ತಂದೆಯ ನಡುವೆ ಹಣದ ಹಣದ ವ್ಯವಹಾರವಿತ್ತು. ಕೊಟ್ಟ ಹಣವನ್ನು ವಾಪಸ್ ಪಡೆಯಲು ಬಾಲಕನ ತಂದೆಯ ಮೇಲೆ ಒತ್ತಡ ಹೇರುವ ಸಲುವಾಗಿ ಅಜ್ಜ ದುಬೈನಲ್ಲಿ ಇದ್ದುಕೊಂಡೇ ತನ್ನ ಸಹಚರರಿಂದ ಮಗುವನ್ನ ಕಿಡ್ನ್ಯಾಪ್ ಮಾಡಿಸಿದ್ದ ಎನ್ನಲಾಗಿದೆ.

ಬಾಲಕನ ಅಜ್ಜ ದುಬೈನಲ್ಲಿರುವ ಇನಾಯತ್ ಹಾಗೂ ಇನ್ನೂ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌‌. ಒಬ್ಬನನ್ನು ಮಾತ್ರ ಬಂಧಿಸಲಾಗಿದ್ದು, ಇನ್ನೂ ನಾಲ್ವರನ್ನು ಬಂಧಿಸಬೇಕಿದೆ. ಸಿಸಿ ಟಿವಿ ದೃಶ್ಯಾವಳಿ ಹಾಗೂ ಕುಟುಂಬದ ಹಿನ್ನೆಲೆ ಗಮನಿಸಿ ಐದು ತಂಡ ತನಿಖೆ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net