ಕೆಜಿಎಫ್​ನಲ್ಲಿ ಸನ್ಯಾಸಿಯ ಕತ್ತು ಕೊಯ್ದು ಕೊಲೆಗೈದ ದುಷ್ಕರ್ಮಿಗಳು

monk
Published on

ಕೆಜಿಎಫ್​: ಕೋಲಾರ ಜಿಲ್ಲೆ ಕೆಜಿಎಫ್​ನ ಆಂಡ್ರಸನ್​ಪೇಟೆ ಪೊಲೀಸ್​ ಠಾಣೆ ವ್ಯಾಪ್ತಿಯ ಗೋನಮಾಕನಹಳ್ಳಿಯ ರಾಮನ ದೇವಾಲಯ ಬಳಿ ದುಷ್ಕರ್ಮಿಗಳು ಸನ್ಯಾಸಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗೋನಮಾಕನಹಳ್ಳಿಯ ವಿಭೂಷಣ್​ ಎಂಬುವರ ಪುತ್ರ ಗಜೇಂದ್ರ(43) ಕೊಲೆಯಾದವರು. ಇವರು ಮಸ್ಕಂ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ನಡೆಸುತ್ತಿದ್ದರು. ನಂತರ ಎಲ್ಲವನ್ನೂ ತೊರೆದು ಬೆಂಗಳೂರು ಸೇರಿ ಅಲ್ಲಿಂದ ಉತ್ತರ ಪ್ರದೇಶದ ವಾರಾಣಸಿಗೆ ತೆರಳಿ ಸನ್ಯಾಸತ್ವ ಸ್ವೀಕರಿಸಿದ್ದರು ಎನ್ನಲಾಗಿದೆ.

ಕರೊನಾ ಹಿನ್ನೆಲೆ ಕಳೆದ ವರ್ಷ ಗ್ರಾಮಕ್ಕೆ ವಾಪಸಾಗಿದ್ದ ಗಜೇಂದ್ರ ಕಾವಿಧಾರಿಯಾಗೇ ಗ್ರಾಮದ ರಾಮನ ಭಜನಾ ಮಂದಿರದಲ್ಲಿ ಮಲಗುತ್ತಿದ್ದರು. ಇತ್ತೀಚೆಗೆ ಗ್ರಾಮದ ಕೆಲವರೊಂದಿಗೆ ಮನಃಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಶುಕ್ರವಾರ ಅಪರಿಚಿತರು ಚಾಕುವಿನಿಂದ ಗಜೇಂದ್ರರ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಂಡ್ರಸನ್​ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net