More

    ಮಂಡ್ಯದ ಐತಿಹಾಸಿಕ ದೇಗುಲದಲ್ಲಿ ಇದೆಂಥಾ ಅಪಚಾರ? ಬೆತ್ತಲಾಗಿ ಓಡಾಡಿದ ರಾಜಕೀಯ ಪಕ್ಷದ ಮುಖಂಡ!

    ಮಂಡ್ಯ: ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಗುರುವಾರ ರಾತ್ರಿ ಕೆಟ್ಟ ಘಟನೆಯೊಂದು ನಡೆದಿದ್ದು, ಭಕ್ತರು ಭಾವನೆಗೆ ಧಕ್ಕೆಯುಂಟಾಗಿದೆ. ದೇವಾಲಯದ ಗರ್ಭಗುಡಿ ಬಳಿ ಬಂದ ಯುವಕನೊಬ್ಬ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ದೇವರ ಪಕ್ಕದಲ್ಲೇ ನಿಲ್ಲುವೆ ಎಂದು ಕಿರುಚಾಡಿದ್ದಾನೆ. ಈತ ರಾಜಕೀಯ ಪಕ್ಷವೊಂದರ ಜಿಲ್ಲಾ ಮುಖಂಡನಂತೆ!

    ಈತನ ಹೆಸರು ರಾಮ್​ಕುಮಾರ್​. ದೇಗುಲದ ಎದುರೇ ಚುರುಮುರಿ ಮಾರಾಟ ಮಾಡುತ್ತಿದ್ದವ. ಗುರುವಾರ ರಾತ್ರಿ 9 ಗಂಟೆಯಲ್ಲಿ ಏಕಾಏಕಿ ಚೆಲುವನಾರಾಯಣಸ್ವಾಮಿ ದೇವಾಲಯದ ಒಳಗೆ ಬಂದ ಈತ, ‘ನಾನು ಚೆಲುವನಾರಾಯಣಸ್ವಾಮಿಯ ತಮ್ಮ. ಅವನ ಪಕ್ಕದಲ್ಲೇ ನಿಲ್ಲುತ್ತೇನೆ’ ಎಂದು ಗರ್ಭಗುಡಿಗೆ ನುಗ್ಗಲು ಯತ್ನಿಸಿದ್ದಾನೆ. ಸ್ಥಳದಲ್ಲೇ ಇದ್ದ ದೇಗುಲ ಸಿಬ್ಬಂದಿ ಈತನನ್ನು ತಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಮ್​ಕುಮಾರ್​, ‘ನಾನೇ ರಾಮ, ನಾನೇ ಅಲ್ಲಾ’ ಎಂದು ಕಿರುಚುತ್ತಾ, ಬಟ್ಟೆಬಿಚ್ಚಿ ಬೆತ್ತಲಾಗಿ ಓಡಾಡಿದ್ದಾನೆ.

    ರಾಮ್​ಕುಮಾರ್​ನ ಅಸಭ್ಯ ವರ್ತನೆಯಿಂದ ಮುಜುಗರಕ್ಕೊಳಗಾದ ಸಿಬ್ಬಂದಿ, ಕೊನೆಗೆ ಬಲವಂತವಾಗಿ ದೇಗುಲದಿಂದ ಈತನನ್ನು ಹೊರಕ್ಕೆ ದಬ್ಬಿದ್ದಾರೆ. ಈ ಎಲ್ಲ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂದ ಹಾಗೇ ಈತ , ತಾನು ಇತ್ತೀಚಿಗೆ ಅಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದು, ಜಿಲ್ಲಾಧ್ಯಕ್ಷನಾಗಿ ಪದಗ್ರಹಣ ಮಾಡಿರುವುದಾಗಿ ಹೇಳಿಕೊಂಡು ಮನೆಯಲ್ಲೇ ಮಂಡ್ಯ ಜಿಲ್ಲಾ ಕಚೇರಿ ತೆರೆದಿರುವುದಾಗಿ ಹೇಳಿಕೊಳ್ಳುತ್ತಿದ್ದ. ಗಾಂಜಾ ಮತ್ತಿನಲ್ಲಿ ಈ ರೀತಿ ವರ್ತಿಸಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ನಿನ್ನೆ ರಾತ್ರಿ ಸ್ಥಳಕ್ಕೆ ಬಂದಾಗಲೂ ರಾಮ್​ಕುಮಾರ್​ ಬಟ್ಟೆ ಹಾಕಿಕೊಳ್ಳದೆ ದೇವಾಲಯಕ್ಕೆ ನುಗ್ಗಲು ಯತ್ನಿಸಿದ್ದಾನೆ. ಈ ಘಟನೆ ಬಗ್ಗೆ ದೇವಾಲಯದ ಇಒ ಮಂಗಳಮ್ಮ, ಮೇಲುಕೋಟೆ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

    ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ದೇಕೆ? ಮನಕಲಕುತ್ತೆ ಈ ಸ್ಟೋರಿ

    ಕೆಎಸ್ಸಾರ್ಟಿಸಿ ಬಸ್​- ಕಾರು ಅಪಘಾತ: ಮದುವೆ ಆರತಕ್ಷತೆಗೆ ಹೊರಟಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಮದ್ವೆ ಸಂಭ್ರಮ ಬೆನ್ನಲ್ಲೇ ಸೂತಕ ಛಾಯೆ: ಪತ್ನಿ-ಮಗಳ ಜತೆ ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts