

ಬೆಂಗಳೂರು: ಕನ್ನಡದ ಹಿರಿಯ ನಟ ಟಿ.ಎಸ್.ಲೋಹಿತಾಶ್ವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೋಲೋ ಆಸ್ಪತ್ರೆಗೆ ಭಾನುವಾರ ರಾತ್ರಿ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟನಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕನ್ನಡ ಚಲನಚಿತ್ರ ನಟ ಮತ್ತು ನಾಟಕಕಾರರಾದ ಲೋಹಿತಾಶ್ವ ಅವರು ಐನೂರಕ್ಕೂ ಹೆಚ್ಚು ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರ ಪುತ್ರ ಶರತ್ ಲೋಹಿತಾಶ್ವ ಅವರು ಕನ್ನಡ ಚಿತ್ರರಂಗದ ಜನಪ್ರಿಯ ಖಳನಟರು.
ತುಮಕೂರಿನ ತೊಂಡಗೆರೆ ಮೂಲದ ಲೋಹಿತಾಶ್ವ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ಯೂನಿರ್ವಸಿಟಿಯಲ್ಲಿ ಪಿ.ಹೆಚ್.ಡಿ. ಪಡೆದಿದಿದ್ದಾರೆ. ನಟನೆ ಮಾತ್ರವಲ್ಲ, ನಾಟಕ, ಕವನ ಸಂಕಲನ, ಕಥಾ ಸಂಕಲನವನ್ನೂ ಬರೆದಿದ್ದಾರೆ.