ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ತುಮಕೂರಲ್ಲಿ ಡಿಕೆಶಿ-ಸಿದ್ದು ಎದುರಲ್ಲೇ ಗೊಂದಲಕ್ಕೆ ತೆರೆ ಎಳೆದ ರಾಹುಲ್​ ಗಾಂಧಿ

bharat jodo yatre gundlupete
Published on

ತುಮಕೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್​ನ ಯಾವುದೇ ಸಭೆ-ಸಮಾವೇಶದಲ್ಲೂ 'ನೆಕ್ಸ್ಟ್​ ಸಿಎಂ ಸಿದ್ದರಾಮಯ್ಯ', 'ಮುಂದಿನ ಸಿಎಂ ಡಿಕೆಶಿ' ಎಂಬ ಘೋಷಣೆಗಳು ಜಿದ್ದಾಜಿದ್ದಿಗೆ ಬಿದ್ದಂತೆ ಮೊಳಗುತ್ತಲೇ ಇದೆ. ರಾಜ್ಯ ಕಾಂಗ್ರೆಸ್​ ಇಬ್ಭಾಗವಾಗಿದೆ, ಸಿದ್ದು-ಡಿಕೆಶಿ ಬಣ ರಾಜಕೀಯವೇ ಕಾಂಗ್ರೆಸ್​ ವಿನಾಶಕ್ಕೆ ಕಾರಣ ಎಂದು ಬಿಜೆಪಿ ಟೀಕಿಸುತ್ತಿದ್ದೆ. ಇದೀಗ 'ಕರ್ನಾಟಕದಲ್ಲಿ ಕಾಂಗ್ರೆಸ್​ನ ಮುಂದಿನ ಸಿಎಂ ಅಭ್ಯರ್ಥಿ ಯಾರು?' ಎಂಬ ಗೊಂದಲ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತೆರೆ ಎಳೆದಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಭಾರತ್​ ಜೋಡೋ ಪಾದಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ ಶನಿವಾರ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಎಂದು ಪ್ರರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್​, ಚುನಾವಣೆ ನಂತರವೇ ಸಿಎಂ ಯಾರೆಂದು ನಿರ್ಧರಿಸಲಾಗುತ್ತೆ. ಸದ್ಯಕ್ಕೆ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ ಎಂದು ಡಿಕೆಶಿ ಮತ್ತು ಸಿದ್ದು ಎದುರೇ ಸ್ಪಷ್ಟಪಡಿಸಿದರು. ಆ ಮೂಲಕ "ಮುಂದಿನ ಸಿಎಂ' ಯಾರೆಂಬ ವಿವಾದಕ್ಕೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net