ಕಲಬುರಗಿ ಪಾಲಿಕೆ ಎಲೆಕ್ಷನ್​ನಲ್ಲಿ ಕಾಂಗ್ರೆಸ್​ ಮೇಲುಗೈ: ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ರಣತಂತ್ರ

kalburgi palike election
Published on

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆ ಇಂದು ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಪಾಲಿಕೆಯ 55 ವಾರ್ಡ್​ಗಲ್ಲಿ ಕಾಂಗ್ರೆಸ್​ 26 ಸ್ಥಾನ ಗೆದ್ದು ಮೊದಲ ಸ್ಥಾನದಲ್ಲಿದೆಯಾದರೂ ಮೇಯರ್​ ಸ್ಥಾನ ಅಲಂಕರಿಸಲು ಇನ್ನೂ ಇಬ್ಬರು ವಿಜೇತರು ಕಾಂಗ್ರೆಸ್​ಗೆ ಮತ ಹಾಕಬೇಕಿದೆ. ಬಿಜೆಪಿ 23 ವಾರ್ಡ್​ಗಳಲ್ಲಿ ಗೆದ್ದರೆ, ಜೆಡಿಎಸ್ 3 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

ಪಾಲಿಕೆ ಮೇಯರ್​ ಗಾದಿಗೇರಲು ಮ್ಯಾಜಿಕ್ ಸಂಖ್ಯೆ 28 ಆಗಬೇಕು. ಈಗ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆಡಳಿತಾರೂಢ ಬಿಜೆಪಿ ಉತ್ತಮ ಸಾಧನೆ ತೋರಿದೆ. ಬಿಜೆಪಿಯು ಜೆಡಿಎಸ್, ಪಕ್ಷೇತರ ಅಭ್ಯರ್ಥಿಯ ಬೆಂಬಲ ಪಡೆದು ಅಧಿಕಾರಕ್ಕೆ ಬರಲು ಕಸರತ್ತು ಆರಂಭಿಸಿದೆ. ವರಿಷ್ಠರ ಸೂಚನೆಯಂತೆ ಬಿಜೆಪಿ ವಿಭಾಗೀಯ ಪ್ರಭಾರಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ಪಾಲಿಗೆಯ ಅಧಿಕಾರ ಚುಕ್ಕಾಣಿಯನ್ನ ಬಿಜೆಪಿಗೆ ದಕ್ಕಿಸಿಕೊಳ್ಳಲೆಂದೇ ತಂತ್ರ ರೂಪಿಸಿದ್ದಾರೆ. ಪಾಲಿಕೆಯ 55 ವಾರ್ಡ್​ಗಳ ಚುನಾಣೆಯಲ್ಲಿ 300 ಅಭ್ಯರ್ಥಿಗಳು ಕಣದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net