ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಎಂಇಎಸ್​ಗೆ ಹೀನಾಯ ಸೋಲು

belagavi bjp
Published on

ಬೆಳಗಾವಿ: ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು, ಎಂಇಎಸ್​ ಹೀನಾಯ ಸೋಲು ಕಂಡಿದೆ. 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ.

ಪಾಲಿಕೆಯ 58 ವಾಡ್೯ಗಳಲ್ಲಿ 54 ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿದೆ. ಈ ಪೈಕಿ ಒಟ್ಟು 36 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಒಟ್ಟು 31 ಸ್ಥಾನ ಗೆಲಲ್ಲಬೇಕಿದೆ. ಆದರೆ, ಬಿಜೆಪಿ ಇನ್ನೂ 5 ಸ್ಥಾನವನ್ನ ಹೆಚ್ಚು ಗೆದ್ದು ಇತಿಹಾಸ ನಿರ್ಮಿಸಿದೆ. ಐವತ್ತು ವರ್ಷದಿಂದ ಮರಾಠಿಗರೇ ಅಧಿಕಾರ ನಡೆಸಿಕೊಂಡು ಬರುತ್ತಿದ್ದರು. ಇದೇ ಮೊದಲ ಬಾರಿಗೆ ಪಾಲಿಕೆ ಗಾದಿ ಬಿಜೆಪಿ ಪಾಲಾಗಿದೆ.

ಸೆ.3ರಂದು ಬೆಳಗಾವಿ ಪಾಲಿಕೆ ಚುನಾವಣೆಯ ಮತದಾನ ನಡೆದಿತ್ತು. 58 ವಾರ್ಡ್​ಗಳಲ್ಲಿ 385 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇಂದು ಬೆಳಗ್ಗೆ 8 ಆರಂಭವಾದ ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ವೇಳೆಗೆ ಸಂಪೂರ್ಣ ಮುಕ್ತಾಯಗೊಂಡಿದೆ. 58 ವಾರ್ಡ್​ಗಳ ಪೈಕಿ 36 ವಾರ್ಡ್​ಗಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಪಾಲಿಗೆ ಗಾದಿಯಲ್ಲಿ ಕಮಲ ಅರಲಿದೆ. ಜೆಡಿಎಸ್​ ಒಂದೇ ಒಂದು ಖಾತೆಯನ್ನೂ ತೆರೆದಿಲ್ಲ.

ಒಟ್ಟು ವಾರ್ಡ್ 58- ಪಕ್ಷವಾರು ಗೆದ್ದ ಸ್ಥಾನಗಳು

ಬಿಜೆಪಿ- 36

ಪಕ್ಷೇತರ- 10

ಕಾಂಗ್ರೆಸ್- 9

ಎಂಇಎಸ್-2

ಎಂಐಎಂಐಎಂ- 1

ಆಮ್ ಆದ್ಮಿ-0

ಜೆಡಿಎಸ್-0

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net