ಕಾಗಿಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ದಂಪತಿ ಚಿಂಚೋಳಿಯಲ್ಲಿ ಶವವಾಗಿ ಪತ್ತೆ

New Project(5)
Published on

ಕಲಬುರಗಿ: ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ ನೆರೆಯ ತೆಲಂಗಾಣ ಮೂಲದ ದಂಪತಿಗಳು ಮೃತಪಟ್ಟಿದ್ದಾರೆ.

ತೆಲಂಗಾಣದ ಮಂತಟ್ಟಿ ಗ್ರಾಮದ ಬುಗ್ಗಪ್ಪ(60) ಮತ್ತು ಯಾದಮ್ಮ‌(55) ಮೃತ ದುರ್ದೈವಿಗಳು. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಜೆಟ್ಟೂರ್ ಗ್ರಾಮದ ಬಳಿ ಶವ ಪತ್ತೆಯಾಗಿದೆ.

ತೆಲಂಗಾಣದ ಬಸಿರಾಬಾದ್​ನಲ್ಲಿ ತರಕಾರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುವಾಗ ಪ್ರವಾಹದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮಂಗಳವಾರ ತಡರಾತ್ರಿ ಪತ್ನಿ ಯಾದಮ್ಮಳ ಶವ ಪತ್ತೆಯಾಗಿತ್ತು, ಇಂದು(ಬುಧವಾರ) ಪತಿ ಬುಗ್ಗಪ್ಪನ ಶವ ಸಿಕ್ಕಿದೆ. ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net