ಹೊಳೆಹೊನ್ನೂರು (ಶಿವಮೊಗ್ಗ): ಮದುವೆಯಾಗಿ ಒಂದು ವಾರ ಕಳೆದಿಲ್ಲ, ಮನೆ ಮುಂದೆ ಹಾಕಿದ್ದ ಚಪ್ಪರ ತೆಗೆದಿಲ್ಲ. ನವದಂಪತಿಗೆ ಹಚ್ಚಿದ್ದ ಅರಿಶಿಣ ಇನ್ನೂ ಮಾಸಿಲ್ಲ. ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ನವವಿವಾಹಿತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸುದೈವ ಎಂದರೆ ಪ್ರಾಣಾಪಾಯದಿಂದ ಪಾರಾಗಿರುವುದು.
ಈ ದುರಂತಕ್ಕೆ ಕಾರಣವಾಗಿದ್ದು ಮಧ್ಯರಾತ್ರಿ ಮನೆ ಗೋಡೆ ಮತ್ತು ಛಾವಣಿ ಕುಸಿದದ್ದು! ಭದ್ರಾವತಿ ತಾಲೂಕು ಅರಹತೊಳಲಿನ ಗಣೇಶ್ ಅವರ ವಿವಾಹ ಹರಿಹರ ತಾಲೂಕು ಹನಗವಾಡಿಯ ಸವಿತಾ ಅವರೊಂದಿಗೆ ಹರಿಹರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನೆರವೇರಿತ್ತು.
ಮದುವೆ ನಂತರ ನವದಂಪತಿ ವರನ ಸ್ವಗ್ರಾಮ ಅರಹತೊಳಲಿಗೆ ಆಗಮಿಸಿದ್ದರು. ಸೋಮವಾರ ಮನೆಗೆ ಬಂದಿದ್ದ ನೆಂಟರೊಂದಿಗೆ ಮಾತನಾಡುತ್ತಾ ಊಟ ಮಾಡಿದ್ದರು. ಮಲಗಿದ ನಂತರ ತಡರಾತ್ರಿ ಮನೆಯ ಗೋಡೆ ಕುಸಿದು ಛಾವಣಿ ಕಳಚಿ ಬಿದ್ದಿದೆ. ಮನೆಯಲ್ಲಿ ಮಲಗಿದ್ದವರ ಪೈಕಿ 13 ಜನರ ಮೇಲೆ ಗೋಡೆ ಹಾಗೂ ಛಾವಣಿಯ ಅವಶೇಷಗಳು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ.
ಗಣೇಶ್ ಹಾಗೂ ಆತನ ಅಕ್ಕನ ಮಗನಿಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ನೆರವಿಗೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿದವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಧುಚಂದ್ರದ ಖುಷಿಯಲ್ಲಿದ್ದ ನವ ದಂಪತಿಗೆ ಮನೆ ಕುಸಿತ ಆಘಾತ ನೀಡಿದೆ. ಅದ್ಹೇನೆ ಇರಲಿ, ಯಾರಿಗೂ ಪ್ರಾಣಹಾನಿ ಆಗಿಲ್ಲ ಎಂಬುದೇ ಸುದೈವ. ಗಂಡಾಂತರದಿಂದ ಪಾರಾದೆವೆಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯಮಟ್ಟದ ಕಬ್ಬಡಿ ಪಂದ್ಯ ಆಟವಾಡುತ್ತಲೇ ಹಾರಿಹೋಯ್ತು ಆಟಗಾರನ ಪ್ರಾಣಪಕ್ಷಿ! ಮನಕಲಕುತ್ತೆ ಸಾವಿನ ಆ ದೃಶ್ಯ
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ