

ಬೆಂಗಳೂರು: ಸಾಕ್ಷ್ಯಚಿತ್ರವೊಂದರಲ್ಲಿ ಹಿಂದು ದೇವತೆ ಕಾಳಿಮಾತೆಗೆ ಅಪಮಾನಿಸಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಲೀನಾ ಮಣಿಮೇಕಲೈ ನಿರ್ದೇಶನದ ‘ಕಾಳಿ’ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ನಲ್ಲಿ ಕಾಳಿದೇವಿಯ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ LGBTQ(ಗೇ, ಟ್ರಾನ್ಸ್ ಜೆಂಡರ್ ಸಮುದಾಯದ್ದು) ಧ್ವಜ, ಬಾಯಲ್ಲಿ ಸಿಗರೇಟ್ ಇದೆ. ಕೆನಾಡದ ಫಿಲ್ಮ್ ಪೆಸ್ಟಿವಲ್ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವ ಭಂಗಿಯ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ಲೀನಾ ತಂದಿದ್ದಾರೆ. ಇದನ್ನು ಖಂಡಿಸಿರುವ ದೆಹಲಿಯ ವಕೀಲರೊಬ್ಬರು ನಿರ್ದೇಶಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿವಾದಾತ್ಮಕ ಪೋಸ್ಟರ್ ನೋಡಿ ಹಿಂದು ಸಂಘಟನೆಗಳು ರೊಚ್ಚಿಗೆದ್ದಿದ್ದು, '#ಲೀನಾ ಅರೆಸ್ಟ್' ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಆದರೂ ನಿರ್ದೇಶಕಿ ಮಾತ್ರ ಮೊಂಡುವಾದ ಮಾಡುತ್ತಿದ್ದಾರೆ. ‘ನನ್ನನ್ನು ಅರೆಸ್ಟ್ ಮಾಡಿ ಎನ್ನಬೇಡಿ, ಲವ್ ಯೂ ಲೀನಾ ಅಂತೇಳಿ’ ಎಂದು ಟ್ವೀಟ್ ಮಾಡಿದ್ದಾರೆ.