ಕಲಬುರಗಿಯಲ್ಲಿ ಪತ್ರಕರ್ತನಿಗೆ ಕರೊನಾ; ಸೋಂಕಿನಿಂದ ಮೃತಪಟ್ಟ ಯುವತಿಯ ಮನೆಗೆ ಹೋಗಿದ್ದೇ ಮುಳುವಾಯ್ತು

corona
Published on

ಕಲಬುರಗಿ: ಜಿಲ್ಲೆಯಲ್ಲಿ ಪತ್ರಕರ್ತನೋರ್ವನಿಗೆ ಕರೊನಾ ಸೋಂಕು ತಗುಲಿದೆ. 62 ವರ್ಷದ ಈ ವರದಿಗಾರ, ಕೊವಿಡ್​-19 ನಿಂದ ಮೃತಪಟ್ಟ ಯುವತಿಯ ಮನೆಗೆ ವರದಿಗಾಗಿ ತೆರಳಿದ್ದರು.

ಆಳಂದ ಪಟ್ಟಣದ 17 ವರ್ಷದ ಯುವತಿ ಎರಡು ದಿನಗಳ ಹಿಂದೆ ಕರೊನಾದಿಂದ ಸಾವನ್ನಪ್ಪಿದ್ದಳು. ಮಾಹಿತಿ ಕಲೆಹಾಕಲು ಅವರ ಮನೆಗೆ ತೆರಳಿದ್ದ, ಈ 62 ವರ್ಷದ ಪತ್ರಕರ್ತ ಆಕೆಯ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು.

ಇವರು ಮರಾಠಿ ಪತ್ರಿಕೆಯೊಂದರ ತಾಲೂಕು ವರದಿಗಾರರಾಗಿದ್ದು, ಇದೀಗ ಚಿಕಿತ್ಸೆಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net