ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಉತ್ತೀರ್ಣರಿಗೆ ಆದಾಯ ತೆರಿಗೆ ಕಚೇರಿಯಲ್ಲಿದೆ ಉದ್ಯೋಗಾವಕಾಶ

jobs
Published on

ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ 2 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಶಾಶ್ವತವಾಗುವ ಸಾಧ್ಯತೆಯೂ ಇರುತ್ತದೆ. ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ಇದೆ. ಒಟ್ಟು 22 ಕ್ರೀಡೆಗಳನ್ನು ಪರಿಗಣಿಸಲಾಗುತ್ತಿದ್ದು, ಯಾವ ಕ್ರೀಡೆಗಳಿಗೆ ಮಾನ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಹುದ್ದೆ ವಿವರ

ಇನ್​ಕಮ್ ಟ್ಯಾಕ್ಸ್ ಇನ್​ಸ್ಪೆಕ್ಟರ್ - 3

ಟ್ಯಾಕ್ಸ್ ಅಸಿಸ್ಟೆಂಟ್ - 7

ಸ್ಟೆನೋಗ್ರ್ರಾಫರ್ ಗ್ರೇಡ್2 - 1

ಮಲ್ಟಿ ಟಾಸ್ಕಿಂಗ್ ಸ್ಟಾಫ್ - 4

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು. ಟ್ಯಾಕ್ಸ್ ಅಸಿಸ್ಟೆಂಟ್​ಗೆ ಪ್ರತಿ ಗಂಟೆಗೆ 8,000 ಪದಗಳ ಡೇಟಾ ಎಂಟ್ರಿ ವೇಗ ಹೊಂದಿರಬೇಕು. ಸ್ಟೆನೋಗ್ರಾಫರ್​ಗೆ ಡಿಕ್ಟೇಷನ್ ಪ್ರತಿ ನಿಮಿಷಕ್ಕೆ 80 ಪದಗಳ ಟೈಪಿಂಗ್ ಸ್ಪೀಡ್, ಇಂಗ್ಲಿಷ್​ನಲ್ಲಿ ಪ್ರತಿ ನಿಮಿಷಕ್ಕೆ 50 ಪದ, ಹಿಂದಿ 65 ಪದಗಳ ಪ್ರತಿಲೇಖನ ಕೌಶಲ ಹೊಂದಿರಬೇಕು.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ. ಇನ್​ಕಮ್ ಟ್ಯಾಕ್ಸ್ ಇನ್​ಸ್ಪೆಕ್ಟರ್​ಗೆ ಗರಿಷ್ಠ 30 ವರ್ಷ, ಮಲ್ಟಿ ಟಾಸ್ಕಿಂಗ್ ಸ್ಟಾಫ್​ಗೆ ಗರಿಷ್ಠ 25 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಇನ್​ಕಮ್ ಟ್ಯಾಕ್ಸ್ ಆಫೀಸರ್​ಗೆ ಮಾಸಿಕ 34,800 ರೂ. ವೇತನ ಇದೆ. ಉಳಿದ ಹುದ್ದೆಗಳಿಗೆ ಮಾಸಿಕ 20,200 ರೂ. ವೇತನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸ್ಥಳ ಹಾಗೂ ಇತರ ಮಾಹಿತಿಯನ್ನು ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಅರ್ಜಿಯಲ್ಲಿ ತಿಳಿಸಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿಯನ್ನು Deputy Commissioner of Income Tax (Hqrs.)(Admn. & Vig.), O/o the Pr. Chief Commissioner of Income Tax, 1st Floor, Aayakar Bhawan, Rajaswa Vihar, Bhubaneswar-751007 ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 30.9.2021

ಅಧಿಸೂಚನೆಗೆ: https://bit.ly/3zOe1q7

ಮಾಹಿತಿಗೆ: www.incometaxdelhi.org

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net