ಕುಳಿತಲ್ಲೇ ಗಳಿಸಿ ಸ್ಕೀಂ: ಮನೆಯಲ್ಲೇ ಕುಳಿತು ಬರೋಬ್ಬರಿ 1.35 ಲಕ್ಷ ರೂಪಾಯಿ ಕಳಕೊಂಡ ಗೃಹಿಣಿ!

Groom-cheating
Published on

ಶಿವಮೊಗ್ಗ: ಮನೆಯಲ್ಲೇ ಕುಳಿತು ಕೆಲಸ ಮಾಡಿ ಆದಾಯ ಗಳಿಸಿ ಸ್ಕೀಂ ಆಸೆಗೆ ಬಿದ್ದ ಮಹಿಳೆಯೊಬ್ಬರು ಮನೆಯಲ್ಲೇ ಕುಳಿತು ಬರೋಬ್ಬರಿ 1.35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಗೃಹಿಣಿಯೊಬ್ಬರು ಜೂ.6ರಂದು ವರ್ಕ್ ಫ್ರಂ ಹೋಮ್ ಜಾಬ್ ಫಾರ್ ವುಮೆನ್ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಅರ್ನ್ ಮೊನಿ ರೈಟ್ ನೌ ಎಂಬ ಪೇಜ್ ತೆಗೆದುಕೊಂಡಿತ್ತು. ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದು ಬಂದಿತ್ತು. ಆ ಲಿಂಕ್‌ನಲ್ಲಿದ್ದ ಮೂರು ವಿಧದ ಟಾಸ್ಕ್‌ಗಳನ್ನು ಮಹಿಳೆ ಪೂರ್ಣಗೊಳಿಸಿದ್ದರು. ಈ ಹಂತದವರೆಗೆ ಅವರು 84,192 ರೂ. ವರ್ಗಾವಣೆ ಮಾಡಿದ್ದು, ಸದಸ್ಯತ್ವ ಶುಲ್ಕವೆಂದು 15 ಸಾವಿರ ರೂ. ಹಾಕಿದ್ದರು. ಜೂ.7ರಂದು ಮತ್ತೆ 36,731 ರೂ. ವರ್ಗಾವಣೆ ಮಾಡಿದ್ದಾರೆ. ಒಟ್ಟು 1,35,923 ರೂ. ವರ್ಗಾವಣೆ ಮಾಡಿದ್ದು, ನಂತರ ಮನೆಯಲ್ಲೇ ಕೆಲಸದ ಆಮಿಷ ತೋರಿಸಿದ್ದ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಅಲ್ಲಿಗೆ ಮೋಸ ಹೋಗಿದ್ದೇನೆ ಎಂಬುದು ಮಹಿಳೆಗೆ ಖಾತ್ರಿಯಾಗಿದೆ. ಈಗ ಅವರು ಸೈಬರ್ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net