ಭೀಮನ ಪಾತ್ರದಲ್ಲಿ ಮಿಂಚಿದ ಜೆಡಿಎಸ್​ ಶಾಸಕ ಶಿವಲಿಂಗೇಗೌಡ! ಗದೆ ಹಿಡಿದು ಡೈಲಾಗ್​ ಹೇಳುತ್ತಿದ್ದಂತೆ ಶಿಳ್ಳೆ ಹಾಕಿ ಪ್ರೋತ್ಸಾಹಿಸಿದ ಜನ

1248900
Published on

ಹಾಸನ: ಕುರುಕ್ಷೇತ್ರ ನಾಟಕ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಭೀಮನ ಪಾತ್ರಕ್ಕೆ ಜೀವ ತುಂಬಿದ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಕೈಯಲ್ಲಿ ಗದೆ ಹಿಡಿದು ಕೌರವರ ಸಂಹಾರ ಪ್ರತಿಜ್ಞೆ ಮಾಡುವ ಸನ್ನಿವೇಶದ ಡೈಲಾಗ್ ಹಾಗೂ ಹಾಡು ಸಭಿಕರಿಂದ ಭಾರೀ ಸಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ದೃಶ್ಯ ಸಖತ್​ ವೈರಲ್​ ಆಗಿದೆ.

ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಗುರುವಾರ ರಾತ್ರಿ ಕುರುಕ್ಷೇತ್ರ ನಾಟಕ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ಶಾಸಕರು, ಭೀಮನ ಪಾತ್ರ ಖಡಕ್ ಡೈಲಾಗ್ ಹೇಳಿ ಗಮನ ಸೆಳೆದರು. ಈ ಹಿಂದೆ ನಾನೂ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ಮಾಡುತ್ತಿದ್ದೆ ಎಂದು ಹಳೆಯ ನೆನಪು ಮೆಲುಕು ಹಾಕಿದ ಶಾಸಕರು, ಅಭಿನಯಿಸಿದರು. ಸದನದಲ್ಲಿ ಸ್ವಾರಸ್ಯಕರ ಮಾತಿನಿಂದಲೇ ಗಮನ ಸೆಳೆಯುವ ಶಿವಲಿಂಗೇಗೌಡರು, ನಿನ್ನೆ ರಾತ್ರಿ ಪೌರಾಣಿಕ ನಾಟಕದ ಅಭಿನಯಿಸಿ ಮೆಚ್ಚುಗೆ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net