ಹಾಸನದಲ್ಲಿ ಇಸ್ಪೀಟ್​ ಅಡ್ಡೆ ಮೇಲೆ ದಾಳಿ: ಠಾಣೆಗೆ ನುಗ್ಗಿ ಮಹಿಳಾ ಪಿಎಸ್​ಐ ಮೇಲೆ ಹಲ್ಲೆಗೆ ಯತ್ನಿಸಿದ ಗ್ರಾಪಂ ಸದಸ್ಯ!

hssan psi gp member
Published on

ಹಾಸನ: ಪೊಲೀಸ್​ ಠಾಣೆಗೆ ನುಗ್ಗಿ ಕರ್ತವ್ಯನಿರತ ಮಹಿಳಾ ಪಿಎಸ್ಐ ಮೇಲೆ ಗ್ರಾಮ ಪಂಚಾಯಿತಿ‌ ಸದಸ್ಯರೊಬ್ಬರ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇರ್ಲಿಗೆ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‌ ವಿರುದ್ಧ ಜಾವಗಲ್ ಠಾಣೆ ಪಿಎಸ್‌ಐ ಶೋಭ ಭರಮಕ್ಕನವರ್ ದೂರು ನೀಡಿದ್ದಾರೆ.

ಇಸ್ಪಿಟ್ ಅಡ್ಡೆ ಮೇಲೆ ದಾಳಿ ಮಾಡಿ ಕೆಲವರನ್ನು ಪಿಎಸ್‌ಐ ಶೋಭ ಭರಮಕ್ಕನವರ್ ಬಂಧಿಸಿದ್ದರು. ಈ ವಿಚಾರವಾಗಿ ಗುರುವಾರ ರಾತ್ರಿ ಏಕಾಏಕಿ ಪೊಲೀಸ್​ ಠಾಣೆಗೆ ಆಗಮಿಸಿದ ಶ್ರೀನಿವಾಸ್​, ನನ್ನ ಕಡೆಯವರನ್ನ ಈ ಕೇಸ್​ನಿಂದ ಹೊರಗಿಡಬೇಕು. ಸುಳ್ಳು ಹೇಳಿ ಅವರನ್ನ ಈ ಪ್ರಕರಣದಲ್ಲಿ ಸಿಲುಕಿಸಿದ್ದೀಯಾ? ಅದ್ಹೇನ್​ ಮಾಡ್ಕೋತ್ತೀಯಾ ಮಾಡ್ಕೋ, ನಾನು ಗ್ರಾಪಂ ಸದಸ್ಯ... ನೀನು ಪಿಎಸ್​ಐ ಅಂದಾಕ್ಷಣ ಹೆದರಲ್ಲ... ಎಂದು ಏಕವಚನದಲ್ಲೇ ಅವಾಚ್ಯವಾಗಿ ನಿಂದಿಸಿ, ಬಟ್ಟೆ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶೋಭಾ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net