ಕಾಲೇಜಿನ ಸ್ವಿಚ್ ಬೋರ್ಡ್​ನಲ್ಲಿ ಅವಿತ್ತಿದ್ದ ನಾಗ! ಮೊಬೈಲ್​ ಚಾರ್ಜ್​ಗೆ ಹಾಕಲು ಹೋದ ವಿದ್ಯಾರ್ಥಿಗೆ ಎದುರಾಯ್ತು ಕಂಟಕ

student
Published on

ಕೊಪ್ಪಳ: ಗಂಗಾವತಿ ನಗರದ ಕಲ್ಮಠ ಕೊಟ್ಟುರೇಶ್ವರ ಐಟಿಐ ಕಾಲೇಜಿನಲ್ಲಿ ಇಂದು ಬೆಳಗ್ಗೆ ವಿದ್ಯಾರ್ಥಿಯೊಬ್ಬನಿಗೆ ನಾಗರಹಾವು ಕಚ್ಚಿದೆ.

ಗವಿಸ್ವಾಮಿ(18) ಹಾವು ಕಡಿತಕ್ಕೊಳಗಾದ ವಿದ್ಯಾರ್ಥಿ. ಈತ ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಗ್ರಾಮದವ. ಕಾಲೇಜು ಕಟ್ಟದ ಸ್ವಿಚ್ ಬೋರ್ಡ್​ವೊಂದರೊಳಗೆ ನಾಗರಹಾವು ಸೇರಿಕೊಂಡಿತ್ತು. ಹಾವು ಇರೋದು ಯಾರೊಬ್ಬರಿಗೂ ಗೊತ್ತಿರಲಿಲ್ಲ. ವಿದ್ಯಾರ್ಥಿ ಗವಿಸ್ವಾಮಿ ಮೊಬೈಲ್​ ಅನ್ನು ಚಾರ್ಚ್​ಗೆ ಹಾಕಲೆಂದು ಸ್ವಿರ್ಚ್​ ಬೋರ್ಡ್​ ಬಳಿ ಕೈ ಇಡುತ್ತಿದ್ದಂತೆ ಹಾವು ಕಚ್ಚಿದೆ.

ಕೂಡಲೇ ಸ್ಥಳದಲ್ಲಿದ್ದ ಸ್ನೇಹಿತರು ಗುರುಸ್ವಾಮಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಪ್ರಾಣಪಾಯದಿಂದ ವಿದ್ಯಾರ್ಥಿ ಪಾರಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net