ವಿಜಯಪುರದಲ್ಲಿ ವಿಚಿತ್ರ ಮಗು ಜನನ, ಹೊಟ್ಟೆಯ ಹೊರಭಾಗದಲ್ಲಿದೆ ಕರುಳು!

baby
Published on

ವಿಜಯಪುರ: ಮಗು ಹುಟ್ಟಿದ ಸಂಭ್ರಮದಲ್ಲಿ ತೇಲಾಡಬೇಕಿದ್ದ ಕುಟುಂಬಕ್ಕೀಗ ಆತಂಕ ಮನೆ ಮಾಡಿದೆ. ನವಮಾಸ ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಅದ್ಯಾವಾಗ ಕಂದನ ಮುಖ ನೋಡ್ತೀನೋ, ಅಪ್ಪಿಕೊಂಡು ಮುದ್ದಾಡುತ್ತೀನೋ ಎಂದು ಕಾಯುತ್ತಿದ್ದ ತಾಯಿಗೆ ನಾರ್ಮಲ್​ ಹೆರಿಗೆ ಆಗಿದೆಯಾದರೂ ಕಂದನ ನೋಡಿ ಕಣ್ಣೀರು ಬಿಟ್ಟರೆ ಆಕೆಗೆ ಬೇರೇನೂ ಬರುತ್ತಿಲ್ಲ. ಅಯ್ಯೋ ದೇವರೇ ಇದ್ಯಾಕೆ ಹೀಗೆ ಮಾಡಿಬಿಟ್ಟೆ ಎಂದು ಗೋಳಾಡುತ್ತಿದ್ದಾರೆ. ಯಾಕಂದ್ರೆ ಆ ಮಗುವಿನ ಹೊಟ್ಟೆಯೊಳಗೆ ಇರಬೇಕಿದ್ದ ಕರುಳು ಹೊರಭಾಗದಲ್ಲಿದೆ!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದಲ್ಲಿ ಸಕುಬಾಯಿ ಮತ್ತು ಸಂಜು ಕಾಂಬಳೆ ದಂಪತಿಗೆ ವಿಚಿತ್ರ ಮಗು ಜನಿಸಿದೆ. ನಾರ್ಮಲ್ ಹೆರಿಗೆ ಆದರೂ ಜನಿಸಿದ ಮಗುವಿನ ಎಲ್ಲ ಕರುಳು ದೇಹದ ಹೊಟ್ಟೆಯಿಂದ ಹೊರಭಾಗದಲ್ಲಿದೆ. ಇದನ್ನೂ ಓದಿರಿ ಸಾವಿನಲ್ಲೂ ಸುಳ್ಳು ಲೆಕ್ಕ! ನಿಮ್ಗೆ ಮನುಷ್ಯತ್ವ ಇಲ್ವಾ? ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಾ.ರಾ.ಮಹೇಶ್​

ಅತೀ ವಿರಳ ಸಂಖ್ಶೆಯಲ್ಲಿ ಇಂತಹ ಮಕ್ಕಳ ಜನನ ವೈದ್ಯಲೋಕಕ್ಕೆ ಸವಾಲಾಗಿದೆ. ಅನುವಂಶೀಯತೆ, ಹತ್ತಿರದ ರಕ್ತ ಸಂಬಂಧಿಕರಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಇಂತಹ ಮಕ್ಕಳ ಜನನ ಆಗುತ್ತೆ ಎಂದು ಬಿಎಲ್​ಡಿಇ ಆಸ್ಪತ್ರೆ ವೈದ್ಯ ಹಾಗೂ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net