ಗಂಡ-ಅತ್ತೆಯ ಕಿರುಕುಳ ಸಹಿಲಾಗದೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ: ಗಂಡನಿಗೆ 6 ವರ್ಷ ಜೈಲು ಶಿಕ್ಷೆ

jail
Published on

ಕೆಜಿಎಫ್​: 2019ರ ಫೆಬ್ರವರಿ 15ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಗೃಹಿಣಿಯೊಬ್ಬಳು ಸತ್ತ ಪ್ರಕರಣ ಸಂಬಂಧ ಮೃತಳ ಗಂಡನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಕೆಜಿಎಫ್​ ರಾರ್ಬಟ್​ಸನ್​ಪೇಟೆ ವ್ಯಾಪ್ತಿಯ ಉರಿಗಾಂಪೇಟೆಯ ವಿನಾಯಕ ದೇವಾಲಯ ಬೀದಿಯ ಎಂ.ಲೋಗನಾಥನದದ ಎಂಬಾತ 2017ರಲ್ಲಿ ಶೈಲಜಾ ಎಂಬುವರನ್ನ ಮದುವೆ ಆಗಿದ್ದ. ಮದುವೆಯಾದಾಗಿನಿಂದ ಶೈಲಜಾಗೆ ಗಂಡ ಮತ್ತು ಇವನ ತಾಯಿ ಸರಳಾ ಕಿರುಕುಳ ಕೊಡುತ್ತಿದ್ದರು. ಇದನ್ನು ಸಹಿಸಲಾಗದೆ ಶೈಲಜಾ 2019ರ ಫೆಬ್ರವರಿ 15ರ ರಾತ್ರಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಸಂಬಂಧ ಲೋಗನಾಥನ್​ ಮತ್ತು ಸರಳಾ ವಿರುದ್ಧ ರಾರ್ಬಟ್​ಸನ್​ಪೇಟೆಯ ಪಿಎಸ್​ಐ ಆರ್​.ಹರೀಶ್​ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ಬಂದ ಪಿಎಸ್​ಐ ಮಧುಕರ್​ ತನಿಖೆ ರ್ಪೂಣಗೊಳಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಜೂ.21ರಂದು ಈ ಪ್ರಕರಣದ ತೀರ್ಪು ನೀಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಲೋಗನಾಥನ್​ಗೆ 6 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಆದೇಶಿಸಿದೆ. ಸರ್ಕಾರದ ಪರ ಭರಕುಲ್ಲಾ ಹುಸೇನ್​ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net