

ಯಳಂದೂರು: ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ಪತ್ನಿ ದೂರು ಕೊಟ್ಟಿದ್ದೇ ತಡ ಭಯಗೊಂಡ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಳ್ಳೇಗಾಲದ ಸೈಯ್ಯದ್ ಇರ್ಫಾನ್(47)ಮೃತ ದುರ್ದೈವಿ. ಈತನ ಪತ್ನಿ ಆಸಿಯಾ ತಾಜ್, ತನ್ನ ಗಂಡ ಕಿರುಕುಳ ಕೊಡುತ್ತಿದ್ದಾನೆ ಎಂದು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ತನ್ನನ್ನು ಬಂಧಿಸಬಹುದು ಎಂದು ಹೆದರಿ ತಲೆ ಮರೆಸಿಕೊಂಡಿದ್ದ ಸೈಯ್ಯದ್, ಯಳಂದೂರಿನ ಮಾಂಬಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ಏ.6ರಂದು ನೇಣಿಗೆ ಶರಣಾಗಿದ್ದಾನೆ.
ತನ್ನ ಗಂಡ ಇರ್ಫಾನ್ ಮತ್ತು ಇವರ ಸಹೋದರಿ ಹಾಗೂ ಈಕೆಯ ಗಂಡ ಸೇರಿಕೊಂಡು ನನಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿರುವ ಆಸಿಯಾ ತಾಜ್ ಮೂವರ ವಿರುದ್ಧ ದೂರು ನೀಡಿದ್ದಳು.