ಮನೆ ಗಾತ್ರದ ಕ್ಷುದ್ರ ಗ್ರಹವೊಂದು ಶೀಘ್ರದಲ್ಲಿ ಭೂಮಿಗೆ ಅಪ್ಪಳಿಸಲಿದೆ?!: NASA ಕೊಟ್ಟ ಏಚ್ಚರಿಕೆ ಏನು?

dk (7)
Published on

NASA: ಶೀಘ್ರದಲ್ಲಿಯೇ ಮನೆ ಗಾತ್ರದ ಕ್ಷುದ್ರಗ್ರವೊಂದು ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ(National Aeronautics and Space Administration) ಹೇಳಿದ್ದು, ಇದರಿಂದ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.

ಹೌದು, ಗಣರಾಜ್ಯೋತ್ಸವ ದಿನದಂದು ಅಂದರೆ ಇದೇ ಜ.26ರಂದು ಈ ಘಟನೆ ಜರುಗಲಿದೆ ಎಂದು ನಾಸಾ ಹೇಳಿದೆ. 2024 YY5 ಎಂಬ ಹೆಸರಿನ ಕ್ಷುದ್ರ ಗ್ರಹ ಇದಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಹಾನ 3.55ರ ಸಮಯದಲ್ಲಿ ಸಂಭವಿಸಲಿದೆ. ಖಗೋಳಶಾಸ್ತ್ರ ಮತ್ತು ವೈಜ್ನಾನಿಕ ಲೋಕದಲ್ಲಿ ಕುತೂಹಲ ಕೆರಳಿಸಿದೆ. ಅಲ್ಲದೆ, ಇಂತಹ ಕ್ಷುದ್ರಗ್ರಹಗಳ ಭೂಮಿಯ ಮಗ್ಗಲಲ್ಲಿ ಹಾದು ಹೋಗುವುದರಿಂದ ಏನೆಲ್ಲಾ ಆಗುತ್ತದೆ ಎಂದು ಜನರಲ್ಲಿ ಸಾಮಾನ್ಯವಾಗಿ ಪ್ರಶ್ನೆಗಳು ಮೂಡುತ್ತವೆ. ಇದಕ್ಕೆಲ್ಲ ಉತ್ತರ ಇಲ್ಲದೆ..

ನಾಸಾ ಹೇಳಿದ್ದೇನು?

2024 YY5 ಎಂಬ ಗ್ರಹ ಸಾಮಾನ್ಯವಾಗಿ ಮನೆಗಾತ್ರದಾಗಿದ್ದು, 44 ವ್ಯಾಸ ಅಡಿಯನ್ನು ಹೊಂದಿದೆ. ಭೂಮಿಯ ಬಳಿ ಬಂದಾಗ ಇದ ವೇಗ ಸುಮಾರು ಗಂಟೆಗೆ 8,765 ಕಿ.ಮೀ ಇರುತ್ತದೆ ಎಂದು ಅಂದಾಜಿಸಲಾಗಿದೆ.

ನಮ್ಮ ಗ್ರಹವನ್ನು(ಭೂಮಿ) ಸಮೀಸಿದಾಗ 4,780,000 ಕಿ,ಮಿ ಭೂಮಿಯಿಂದ ದೂರ ಇರುತ್ತದೆ. ಅಷ್ಟು ದೂರಲ್ಲಿ ಹಾದುಹೋಗಲಿದೆ. ಹೀಗಾಗಿ, ಭೂಮಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಹಾಗೂ ಅಪಾಯಕಾರಿನೂ ಅಲ್ಲ. ಭೂಮಿಯಿಂದ 4.7 ಮಿಲಿಯನ್​ ಕಿಲೊಮೀಟರ್​ಗಳಿಷ್ಟಿದ್ದೆರೆ ಮಾತ್ರ ಅದು ಅಪಾಯಕಾರಿ ಎಂದು ಎಂದು ನಾಸಾ ಹೇಳಿದೆ ಎಂದು ವರದಿ ಉಲ್ಲೇಖಿಸಿವೆ.

ಇನ್ನೂ ನಾಸಾ ಪ್ರಕಾರ, ಯಾವುದೇ ಕ್ಷುದ್ರಗ್ರಹ 150 ಮೀಟರ್​ಗಿಂತ ಅಧಿಕ ಗಾತ್ರದಲ್ಲಿ ಮತ್ತು ಭೂಮಿಯ ನಿರ್ಣಯಕ ಹಂತದಲ್ಲಿ ಹಾದುಹೋದರೆ ಅದು ಅಪಾಯಕಾರಿಯಾಗಿದೆ. ಆದರೆ, ಜ.26ರಂದು ಹಾದುಹೋಗಲಿರುವ 2024 YY5 ಗಾತ್ರ ಚಿಕ್ಕದಾಗಿದ್ದು, ಅಪಾಯಕಾರಿಯಲ್ಲ ಎಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net