ಗ್ರಾಹಕರನ್ನು ಸೆಳೆಯುತ್ತಿದೆ ರೆಸಾರ್ಟ್ ನಡುವಿನ ಮನೆ

Untitled design (2)
Published on

ಬೆಂಗಳೂರು: ನಗರ ಜೀವನದ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ಫಾಮ್ರ್ ಹೌಸ್​ಗಳತ್ತ ಒಲವು ಹೊಂದಿರುವವರಿಗೆ ಈಗಾಗಲೇ ಮೂರು ಫಾಮ್ರ್ ಲ್ಯಾಂಡ್​ಗಳನ್ನು ಅಭಿವೃದ್ಧಿಪಡಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಶರಣ್ಯ ಪ್ರಾಪರ್ಟಿಸ್​ನವರ ಶರಣ್ಯ ಫಾಮ್ರ್ ಹೌಸ್ ಫೇಸ್-2 ಅತ್ಯುತ್ತಮ ಆಯ್ಕೆಯಾಗಿದೆ.

ಮೊದಲನೇ ಪ್ರಾಜೆಕ್ಟ್​ನ ಯಶಸ್ಸಿನೊಂದಿಗೆ ಗ್ರಾಹಕರ ಕೋರಿಕೆಯಂತೆ ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಕೇವಲ 5 ನಿಮಿಷದ ಪ್ರಯಾಣದಲ್ಲಿರುವ ‘ಶರಣ್ಯ ಹಿಲ್ ವ್ಯೂ ಫಾಮ್್ಸರ್ 2ನೇ ಹಂತ’ ಶ್ರೀಗಂಧದ ಬೀಡು ಎಂಬ ಅನ್ವರ್ಥಕಕ್ಕೆ ಉದಾಹರಣೆಯಾಗಿದೆ. ಸ್ಯಾಂಡಲ್ ವಿಥ್ ಫಾಮ್ರ್ ಹೌಸ್ ಪರಿಕಲ್ಪನೆಯಡಿ ಆರಂಭಿಸಿರುವ ಈ ಹೊಸ ಯೋಜನೆಯಲ್ಲಿ ಒಂದೇ ಹೂಡಿಕೆಗೆ ನಾಲ್ಕು ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ. ಫಾಮ್ರ್ ಲ್ಯಾಂಡ್ ಖರೀದಿಸಿದರೆ ಕುಟುಂಬದ ಸದಸ್ಯರಿಗೆ ರೆಸಾರ್ಟ್ ಸೌಲಭ್ಯ ಉಚಿತವಾಗಿ ದೊರೆಯಲಿದೆ. ಫಲವತ್ತಾದ ಭೂಮಿಯಲ್ಲಿ ಬೆಳೆದ ಶ್ರೀಗಂಧದ ಮರಗಳಿಂದ ಅಧಿಕ ಲಾಭ ಗಳಿಸಬಹುದು. ಹಾಗೂ ಫಾಮ್ರ್ ಹೌಸ್ ಬಾಡಿಗೆಗೆ ನೀಡುವುದರಿಂದಲೂ ಆದಾಯ ಪಡೆಯಬಹುದಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಹೂಡಿಕೆ ಕೆಲವೇ ವರ್ಷಗಳಲ್ಲಿ ದ್ವಿಗುಣವಾಗಲಿದೆ ಎಂಬುದು ಶರಣ್ಯ ಫಾಮ್್ಸರ್ ಮಾಲೀಕ ವಿ.ಎಂ. ರಾಜೇಶ್ ಅವರ ವಿಶ್ಲೇಷಣೆ.

ಫಾಮ್ರ್ ಹೌಸ್​ನ ಸೌಲಭ್ಯಗಳು

ಫಾಮ್ರ್ ಹೌಸ್​ನಲ್ಲಿ ಕ್ಲಬ್ ಹೌಸ್, ಈಜುಕೊಳ, ಬ್ಯಾಂಡ್ಮಿಟನ್ ಕೋರ್ಟ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ಮಕ್ಕಳ ಆಟದ ಮೈದಾನ, ಉದ್ಯಾನ, ಪ್ರತಿ ಫಾಮ್ರ್ ಹೌಸ್​ಗೆ ವಿಶಾಲವಾದ ರಸ್ತೆ, ಕುಡಿಯುವ ನೀರು, ಹನಿ ನೀರಾವರಿ, ವಿದ್ಯುತ್ ಸಂಪರ್ಕ, ಔಟ್​ಡೋರ್ ಜಿಮ್ ಸೇರಿ ಅತ್ಯಾಧುನಿಕ ಸೌಲಭ್ಯ ಇದೆ. ಪ್ರತ್ಯೇಕವಾಗಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಬರಲಿದ್ದು, ಗ್ರಾಹಕರಿಗೆ ಬೇಕಾದ ವಿನ್ಯಾಸದಲ್ಲಿ ಸಂಸ್ಥೆಯವರೇ ಮನೆ ಕಟ್ಟಿಕೊಡಲಿದ್ದಾರೆ.

ಪರಿಸರದ ಅನುಭವ

ಇಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿರುವ ಫಾಮ್ರ್ ಲ್ಯಾಂಡ್​ನಲ್ಲಿ ಪ್ರಕೃತಿ ಮತ್ತು ಆಧುನಿಕ ಸೌಕರ್ಯಗಳ ಮಿಶ್ರಣವಿದ್ದು, 5.5- 6 ಗುಂಟೆ ಜಾಗದಲ್ಲಿ ರೆಸಾರ್ಟ್ ಶೈಲಿಯ ಫಾರ್ಮ್ಸ್​ಹೌಸ್ ಅನುಭವ ಒದಗಿಸಲಿದೆ. 25-30 ಶ್ರೀಗಂಧದ ಮರ ಜತೆಗೆ ತೇಗ, ಮಹಾಗನಿ, ತೆಂಗು, ನೇರಳೆ, ಸೀಬೆ ಮತ್ತು ಸಪೋಟ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಬಹುದು. ಈಗಾಗಲೇ ಶ್ರೀಗಂಧದ ಸಸಿಗಳನ್ನು ನೆಡಲಾಗಿದೆ. ಜಮೀನಿನ ಮೇಲೆ ಹೂಡಿಕೆ ಮಾಡುವವರಿಗೆ ಇದು ಬೆಸ್ಟ್ ಯೋಜನೆಯಾಗಿದ್ದು, ಭವಿಷ್ಯದಲ್ಲಿ ದುಪ್ಪಟ್ಟು ಆದಾಯವೂ ಸಿಗಲಿದೆ. ವಾರಾಂತ್ಯದಲ್ಲಿ ಕುಟುಂಬಸಮೇತ ಶುದ್ಧ ಪರಿಸರದಲ್ಲಿ ಸಮಯ ಕಳೆಯಬಹುದು.

ಶರಣ್ಯ ಹಿಲ್ ವ್ಯೂ ಫಾರ್ಮ್ಸ್  2ನೇ ಹಂತದ ಯೋಜನೆಯಲ್ಲಿ ನಾಲ್ಕು ರೀತಿಯಲ್ಲಿ ಲಾಭ ಪಡೆಯಬಹುದಾಗಿದೆ. ಜತೆಗೆ ಫಾರ್ಮ್ಸ್ ನ ನಿರ್ವಹಣೆ ಸಂಸ್ಥೆ ವತಿಯಿಂದಲೇ ಮಾಡಲಾಗುವುದು. ಮೈಸೂರು-ಬನ್ನೂರು ರಸ್ತೆಗೆ ಸಮೀಪದಲ್ಲಿದ್ದು, ಮೈಸೂರಿನಿಂದ 32 ಕಿ.ಮೀ. ಫೆರಿಫೆರಲ್ ರಿಂಗ್ ರಸ್ತೆ ಮೂಲಕ 22 ಕಿ.ಮೀ. ದೂರವಿದೆ. | ವಿ.ಎಂ. ರಾಜೇಶ್ ಶರಣ್ಯ ಫಾರ್ಮ್ಸ್ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net