ಬಾಳೆಹಣ್ಣು ಕೊಟ್ಟ ಆಟೋ ಡ್ರೈವರ್​ನ​ ಬೆನ್ನೇರಿದ ಕೋತಿ! ಎಲ್ಲೇ ಹೋದ್ರೂ ಬಿಡ್ತಿಲ್ಲ... ಮನೆಗೇ ಬರುತ್ತೆ...

hosur monkey
Published on

ಹೊಸೂರು (ತಮಿಳುನಾಡು): 3 ದಿನದ ಹಿಂದೆ ಬಸ್​ ನಿಲ್ದಾಣದಲ್ಲಿದ್ದ ಕೋತಿಯೊಂದಕ್ಕೆ ಆಟೋ ಡ್ರೈವರ್​ವೊಬ್ಬರು ತಿನ್ನಲು ಬಾಳೆಹಣ್ಣು ಕೊಟ್ಟರು. ಹಣ್ಣು ತಿಂದ ಕೋತಿ ಸುಮ್ಮನಿರಬೇಕು ತಾನೇ... ಆದ್ರೆ ಆ ಡ್ರೈವರ್​ನ ಹೆಗೇಲಿರಿದೆ. ಎಲ್ಲೇ ಹೋದ್ರೂ ಹಿಂಬಾಲಿಸುತ್ತೆ, ಮನೆಗೇ ಹುಡುಕಿಕೊಂಡು ಬರುತ್ತೆ...

ಹೊಸೂರು ನಗರದ ಡೆಂಕಣಿಕೋಟೆ ಬಸ್​ ನಿಲ್ದಾಣದಲ್ಲಿ ಕೋತಿಯೊಂದಕ್ಕೆ ದೇವರೆಡ್ಡಿಪಾಳ್ಯಂ ನಿವಾಸಿ ರವಿ ಎಂಬುವರು ಶುಕ್ರವಾರ ಬಾಳೆಹಣ್ಣು ಕೊಟ್ಟಿದ್ದರು. ಆಗಿನಿಂದ ಆ ಕೋತಿ ಅವರ ಹೆಗಲ ಮೇಲೆ ಕುಳಿತಿದ್ದು, ಆಟೋ ಓಡಿಸಲು ಬಿಡದೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅವರು ಕೋತಿಯನ್ನು ವಶಕ್ಕೆ ಪಡೆದು, ಕಣ್ತಪ್ಪಿಸಿ ಹೋಗುವಂತೆ ಹೇಳಿದ್ದರು. ರವಿ ಹೋದ ಬಳಿಕ ಅಧಿಕಾರಿಗಳು ಕೋತಿಯನ್ನು ಬಿಟ್ಟಿದ್ದರು. ಆದರೀಗ ಆ ಕೋತಿ ರವಿ ಅವರ ಮನೆಗೇ ಹೋಗಿ ಅಲ್ಲೇ ಆಶ್ರಯ ಪಡೆದಿದೆ. ಕೋತಿಯ ಕಿರಿಕಿರಿಗೆ ರವಿ ಹೈರಾಣಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net