

ಹುಬ್ಬಳ್ಳಿ: ಗದಗ ಬೈಪಾಸ್-ಗದಗ-ಹೊಂಬಳ ಮಧ್ಯೆ ನಡೆದಿರುವ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿಯಿಂದಾಗಿ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಮಾ.7ರಿಂದ 11ರವರೆಗೆ ಸೊಲ್ಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ಹಾಗೂ ಎಸ್ಎಸ್ಎಸ್ ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು: ಮಾ.10ರವರೆಗೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್- ಗದಗ ಎಕ್ಸ್ಪ್ರೆಸ್ ರೈಲು ಸಂಚಾರ ಬಾಗಲಕೋಟೆ- ಗದಗ ಮಧ್ಯೆ ರದ್ದಾಗಿದ್ದು, ಈ ರೈಲು ಬಾಗಲಕೋಟೆವರೆಗೆ ಮಾತ್ರ ಸಂಚರಿಸಲಿದೆ. ಮಾ.7ರಿಂದ 11ರ ವರೆಗೆ ಗದಗ-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಎಕ್ಸ್ ರೈಲು ಸಂಚಾರ ಗದಗ-ಬಾಗಲಕೋಟೆ ಮಧ್ಯೆ ರದ್ದಾಗಿದ್ದು, ಈ ರೈಲು ಬಾಗಲಕೋಟೆಯಿಂದ ಸಂಚಾರ ಪ್ರಾರಂಭಿಸಲಿದೆ.