ಸಡಗರದಿಂದ ಜರುಗಿದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ: ಮಾ.14ಕ್ಕೆ ವೈರಮುಡಿ ಬ್ರಹ್ಮೋತ್ಸವ

Melukote Cheluvanarayanaswamy Teppotsava
Published on

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಮಾ.14ರಂದು ನಡೆಯಲಿದ್ದು, ವೈರಮುಡಿ ಜಾತ್ರಾ ಮಹೋತ್ಸವ ಆರಂಭಕ್ಕೂ ಮುನ್ನ ಚೆಲುವನಾರಾಯಣನಿಗೆ ಭಾನುವಾರ ರಾತ್ರಿ ಮೊದಲ ತೆಪ್ಪೋತ್ಸವ ಸಡಗರ ಸಂಭ್ರಮದೊಂದಿಗೆ ಜರುಗಿತು.

ಅಮೂಲ್ಯವಾದ ಮುತ್ತುಮುಡಿ ಧರಿಸಿ ಶ್ರೀದೇವಿ, ಭೂದೇವಿ ಮತ್ತು ರಾಮಾನುಜರೊಂದಿಗೆ ಸ್ವಾಮಿಯು ತೆಪ್ಪೋತ್ಸವದಲ್ಲಿ ವಿರಾಜಮಾನನಾಗಿ ವಿಹಾರ ಮಾಡಿದರು. ಕಲ್ಯಾಣಿಯ ಸೋಪಾನಗಳ ಮೇಲೆ ಕುಳಿತಿದ್ದ ಭಕ್ತರು ಈ ವೈಭವವನ್ನು ಕಣ್ತುಂಬಿಕೊಂಡರು. ತೆಪ್ಪೋತ್ಸವದ ವೇಳೆ ಕಲ್ಯಾಣಿಯ ಸಮುಚ್ಛಯಕ್ಕೆ ಇದೇ ಪ್ರಥಮ ಬಾರಿಗೆ ಆಕರ್ಷಕವಾಗಿ ಸರಳ ದೀಪಾಲಂಕಾರ ಮಾಡಲಾಗಿತ್ತು.

ಸಂಜೆ 6.30ಕ್ಕೆ ದೇವಾಲಯದಿಂದ ಮಂಗಳವಾದ್ಯದೊಂದಿಗೆ ನಡೆದ ಸ್ವಾಮಿಯ ಉತ್ಸವ ಕಲ್ಯಾಣಿ ತಲುಪಿದ ನಂತರ ಅಲ್ಲಿ ಜೋಯಿಸರಿಂದ ಮಹೂರ್ತ ಪಠಣ ನೆರವೇರಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಮೂರು ಸುತ್ತು ವಿಹಾರ ನಡೆಸಿದ ನಂತರ ತೆಪ್ಪೋತ್ಸವ ಮುಕ್ತಾಯವಾಯಿತು.

ಮೇಲುಕೋಟೆ ಶಾಸಕ ಸಿ.ಎಸ್​.ಪುಟ್ಟರಾಜು ಅವರು ನೀಡಿದ 12 ಲಕ್ಷ ರೂ. ಅನುದಾನದಲ್ಲಿ ತೆಪ್ಪ ಮಂಟಪವನ್ನು ನಿರ್ಮಿಸಲಾಗಿದೆ. ಮಾ.14ರಂದು ವೈರಮುಡಿ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net