ರಂಗಭೂಮಿ ಟ್ರಸ್ಟ್ ವತಿಯಿಂದ ಸತ್ಯವನ್ನೇ ಹೇಳುತ್ತೇನೆ ಚರಿತ್ರೆಯ ಉತ್ಖನನ ನಾಟಕ

ರಂಗಭೂಮಿ ಟ್ರಸ್ಟ್ ವತಿಯಿಂದ ‘ಸತ್ಯವನ್ನೇ ಹೇಳುತ್ತೇನೆ’ ಚರಿತ್ರೆಯ ಉತ್ಖನನ ಎಂಬ ನಾಟಕ ಪ್ರದರ್ಶನವನ್ನು ಅ.28, 29 ಮತ್ತು 30 ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಡೆಯಲಿದೆ
1
Published on

ರಂಗಭೂಮಿ ಟ್ರಸ್ಟ್ ವತಿಯಿಂದ ‘ಸತ್ಯವನ್ನೇ ಹೇಳುತ್ತೇನೆ’ ಚರಿತ್ರೆಯ ಉತ್ಖನನ ಎಂಬ ನಾಟಕ ಪ್ರದರ್ಶನವನ್ನು ಅ.28, 29 ಮತ್ತು 30 ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಡೆಯಲಿದೆ.

ರಂಗಾಯಣದ ಮಾಜಿ ನಿರ್ದೇಶಕರು ಆದ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿದ್ದಾರೆ. ಜತೆಗೆ ವಿನ್ಯಾಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶಿವಕುಮಾರ್ (ಸಂಗೀತ), ಮಂಜುನಾಥ್ ಹಿರೇಮಠ್(ಬೆಳಕು), ಅನಿತಾ ಕಾರ್ಯಪ್ಪ(ವಸ್ತ್ರ ವಿನ್ಯಾಸ), ಗುರುಪ್ರಸಾದ್ (ಭಿತ್ತಿಪತ್ರ ವಿನ್ಯಾಸ), ಮಂಜುನಾಥ್ ಶಿಲ್ಪಿ(ರಂಗ ಸಹಾಯ), ಸುನೀಲ್(ರಂಗ ನಿರ್ವಹಣೆ), ರವಿ ಮೂರೂರು (ಸಂಗೀತ ವಿನ್ಯಾಸ), ಸುಬ್ರಹ್ಮಣ್ಯ ಮೈಸೂರು(ಧ್ವನಿ ವಿನ್ಯಾಸ) ರಂಗ ಹಿಂದೆ ಸಹಕರಿಸಿದ್ದಾರೆ.

ಅನಿತಾ ಕಾರ್ಯಪ್ಪ, ಎಸ್.ಶಿವಮೂರ್ತಿ, ಸುನೀಲ್ ಟಪಾಕಿ, ಪವನ್ ದೇಶಪಾಂಡೆ, ಚೇತನ್ ಕಾಟೇನಹಳ್ಳಿ, ವಿ.ಸಿ.ಚಿದಾರ್ಜುನ್, ಎಸ್.ವೈಭವ್‌ನಾಗ್, ಎಸ್.ಎಚ್.ಕಿರಣ್, ಶಿವಕುಮಾರ್ ಅಭಿನಯಿಸಿದ್ದಾರೆ.

ಬ್ರಿಟಿಷರಿಂದ ಬಿಡುಗಡೆಗೊಂಡ ಭಾರತದ ಸ್ವಾತಂತ್ರ್ಯ ನಂತರ ನೆಹರೂ ಸರ್ಕಾರ ‘ಜಾತ್ಯತೀತ’ ಹೆಸರಿನಲ್ಲಿ ಚರಿತ್ರೆಯನ್ನು ತಿರುಚಿ ಬರೆಯಿಸಿ ಹಿಂದು ಧರ್ಮದ ಬಗ್ಗೆ ನಿಕೃಷ್ಟತೆಯನ್ನು, ಬೇರೆ ಧರ್ಮದ ಬಗ್ಗೆ ಅಭಿಮಾನವನ್ನು ಮೂಡಿಸುವ ಪಠ್ಯ ರಚಿಸಿ ನಮ್ಮ ಯುವ ಪೀಳಿಗೆಯ ಮಿದುಳಿಗೆ ತುಂಬಿ ನಮ್ಮ ಸಮಾಜವನ್ನು ಕುರಿಗಳಂತೆ ಮಾಡಲಾಗಿದೆ ಎಂದು ಇತಿಹಾಸಕಾರ ಆರ್.ಸಿ.ಮುಜುಂದಾರ್ ಬರೆದಿದ್ದಾರೆ.

ಅಂತರಂಗದೆದುರಿಗೆ ಶ್ರೇಷ್ಠ ಆದರ್ಶ ಇಲ್ಲದೆ ಹೋದರೆ ಯಾವ ವ್ಯಕ್ತಿ ತಾನೆ ಉನ್ನತನಾಗಬಹುದು? ದುರದೃಷ್ಟವೆಂದರೆ ಈಗ ಪ್ರಕಟಗೊಳ್ಳುತ್ತಿರುವ ಶಾಲಾ ಪಠ್ಯ-ಪುಸ್ತಕಗಳಲ್ಲಿ ಅನುಪಯುಕ್ತ ಸರಕು ತುಂಬಿದೆ. ರಾಜಾರಾಮ್ ಮೋಹನ್ ರಾಯ್ ಅವರು ಸತಿಪದ್ಧತಿ ನಿರ್ಮೂಲನಕ್ಕೆ ಹೋರಾಡಿದ್ದನ್ನು ಓದುತ್ತೇವೆ. ಆದರೆ, ಬೇರೆ ಧರ್ಮಗಳು ನಡೆಸಿದ ಸಂಘರ್ಷದ ಬಗ್ಗೆ ಎಲ್ಲೂ ಸೊಲ್ಲಿಲ್ಲ. ನಮ್ಮ ವೀರರ ಗೆಲುವಿನ ಪಾಠವಿಲ್ಲ. ಎಲ್ಲ ಸೋಲಿನ ಕತೆಗಳೇ ತುಂಬಿವೆ. ಹಾಗಾಗಿ ಸ್ವಾತಂತ್ರ್ಯ ಹೋರಾಟದ ನಮ್ಮ ಹೀರೋಗಳಿಂದಲೇ ನಮ್ಮ ಚರಿತ್ರೆಯ ಸತ್ಯಗಳನ್ನು ಬಾಯಿ ಬಡಿಸುವ ಪ್ರಯತ್ನವೇ ನಾಟಕ ‘ಸತ್ಯವನ್ನೇ ಹೇಳುತ್ತೇನೆ’ ನಾಟಕವಾಗಿದೆ’ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.

ಈ ನಾಟಕದಲ್ಲಿನ ಪಾತ್ರಗಳಾಗಿರುವ ಎಲ್ಲ ನಾಯಕರ ಸಂಭಾಷಣೆಗೂ ಆಧಾರಗಳಿವೆ. ಅನೇಕ ಪುಸ್ತಕಗಳ ಅಧ್ಯಯನದಿಂದ ಈ ನಾಟಕ ಸಿದ್ಧಪಡಿಸಲಾಗಿದೆ. ಚರಿತ್ರೆ ಎಂದಿಗೂ ಭೂಗರ್ಭದಲ್ಲಿ ಅವಿತಿರಬಾರದು ಅದು ಸ್ಫೋಟಿಸಬೇಕು. ಸತ್ಯಚರಿತ್ರೆಯ ಅನಾವರಣವೇ ‘ಸತ್ಯವನ್ನೇ ಹೇಳುತ್ತೇನೆ’ ನಾಟಕವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net