ಜಮ್ಮು-ಕಾಶ್ಮೀರದಲ್ಲಿ ಹಿಂದೂ ಶಿಕ್ಷಕಿಯನ್ನ ಗುಂಡಿಕ್ಕಿ ಕೊಂದ ಉಗ್ರರು

New Project(6)
Published on

ಕುಲ್ಗಾಮ್​: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ಉಗ್ರರು ಹಿಂದೂ ಶಾಲೆಯ ಶಿಕ್ಷಕಿಯೊಬ್ಬರನ್ನು ಮಂಗಳವಾರ ಗುಂಡಿಕ್ಕಿ ಕೊಂದಿದ್ದಾರೆ.

ಜಮ್ಮು ಪ್ರದೇಶದ ಸಾಂಬಾದ ರಜನಿ ಬಾಲ(36) ಮೃತರು. ಕಾಶ್ಮೀರ ಪಂಡಿತ ಸುಮುದಾಯಕ್ಕೆ ಸೇರಿದ ಇವರು ಕುಲ್ಗಾಮ್​ನ ಗೋಪಾಲಪೊರದ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಶಾಲೆಗೆ ಹೋಗುವಾಗ ಗೋಪಾಲಪೊರ ಪ್ರದೇಶದಲ್ಲಿ ಉಗ್ರರು ಶಿಕ್ಷಕಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಶಿಕ್ಷಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದರು. ರಜನಿ ಅವರು ಕಾಶ್ಮೀರಿ ಪಂಡಿತ ರಾಜ್​ ಕುಮಾರ್​ ಪತ್ನಿ.

ಶಿಕ್ಷಕಿಯನ್ನು ಅಮಾನುಷವಾಗಿ ಕೊಂದವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ. ಈ ಕೃತ್ಯದಲ್ಲಿ ಭಾಗಿಯಾದ ಉಗ್ರರನ್ನು ಶೀಘ್ರವೇ ಬಂಧಿಸಿ ಶಿಕ್ಷೆಯಾಗುವಂತೆ ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 12ರಂದು ಬುದ್ಗಾಮ್​ ಜಿಲ್ಲೆಯ ಚದೂರದಲ್ಲಿರುವ ಕಚೇರಿಯಲ್ಲಿ ರಾಹುಲ್​ ಭಟ್​ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ರಜನಿ ಅವರ ಸಾವಿಗೆ ಸಂತಾಪ ಸೂಚಿಸಿರುವ ನ್ಯಾಷನಲ್​ ಕಾನ್ಫರೆನ್ಸ್​ನ ಉಪಾಧ್ಯಕ್ಷ ಒಮರ್​ ಅಬ್ದುಲ್ಲಾ, ಶಿಕ್ಷಕಿ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇದೊಂದು ಹೇಯ ಕೃತ್ಯ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net