

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಯುವಜನರು ಸೇರಿದಂತೆ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಅಧಿಕವಾಗಿವೆ. ಇದರಿಂದಾಗಿ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚುತ್ತಿದ್ದು, ಅನಗತ್ಯ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಹೃದಯ ರೋಗದ ಕಾರಣ ಮತ್ತು ಪರಿಹಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ತುರ್ತು ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣ, ಮುಂಜಾಗ್ರತೆ ಮತ್ತು ಚಿಕಿತ್ಸೆಯ ಕುರಿತು ಬೆಂಗಳೂರಿನ ಪ್ರಸಿದ್ಧ ರಾಮಯ್ಯ ಮೆಮೊರಿಯಲ್ ಹಾಸ್ಪಿಟಲ್ನ, ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್,ಕಾರ್ಡಿಯಾಲಜಿ ವಿಭಾಗದ ತಜ್ಞ ವೈದ್ಯರೊಂದಿಗೆ ನಡೆಸಿದ ಸಂವಾದದ ಸಾರ ಇಂತಿದೆ.
ಆಸ್ಪತ್ರೆಯು ವಿಶ್ವದರ್ಜೆಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಹೊಂದಿದೆ. ಮನುಷ್ಯನ ದೇಹದಲ್ಲಿ ಕೆಲವು ಅಂಗಾಂಗಗಳು ಒಂದಕ್ಕಿಂತ ಹೆಚ್ಚಿಗೆ ಇರುತ್ತವೆ. ಆದರೆ ಹೃದಯ ಮಾತ್ರ ಒಂದೇ. ಹೃದಯ ವಿಫಲವಾದರೆ ಜೀವಹಾನಿ ಸಂಭವಿಸುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ, ವ್ಯಾಯಾಮರಹಿತ ದಿನಚರಿ, ಮಧುಮೇಹ, ಬಿಪಿ, ಕೊಲೆಸ್ಟ್ರಾಲ್ನಿಂದ ಹೃದಯದ ರಕ್ತನಾಳದಲ್ಲಿ ಬ್ಲಾಕ್ ಆಗುತ್ತದೆ. ಜತೆಗೆ ಭಾರತೀಯರಲ್ಲಿ ವಂಶವಾಹಿನಿಯಿಂದಲೂ ಹೃದಯಾಘಾತ ಸಾಧ್ಯತೆ ಇರುತ್ತದೆ. ಇದಕ್ಕೆ ಪ್ರಮುಖ ಪರಿಹಾರ ಶಿಸ್ತುಬದ್ಧ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಉತ್ತಮ ಹವ್ಯಾಸಗಳೊಂದಿಗೆ, ಒತ್ತಡರಹಿತ ಜೀವನ ನಡೆಸುವುದಕ್ಕೆ ಪ್ರಯತ್ನಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಗದಿತ ಕಾಲಾವಧಿಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು.
40 ವರ್ಷ ದಾಟಿದ ನಂತರ ಎಲ್ಲರೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಇದರಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಸಾಧ್ಯ. ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿವೆ. ಅದಕ್ಕೆ ಸಂಬಂಧಪಟ್ಟ ಸುಧಾರಿತ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣಗಳಿಂದ ಚಿಕಿತ್ಸೆ ನೀಡುವ ಸೌಲಭ್ಯಗಳಿವೆ. ಜತೆಗೆ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಒಂದು ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವುದರಿಂದ ಇತರೆ ಖಾಸಗಿ ಕಾಪೋರೇಟ್ ಆಸ್ಪತ್ರೆಗಳಿಗಿಂತ ಶೇ. 30-40 ಚಿಕಿತ್ಸಾ ವೆಚ್ಚ ಕಡಿಮೆಯಾಗಲಿದ್ದು, ಇದನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದು. ರೇಡಿಯಾಲಜಿ, ರೋಬಾಟಿಕ್ ಸರ್ಜರಿ, ಕಿಡ್ನಿ ಕಸಿ, ಹೃದಯದ ಕಸಿ, ಲಿವರ್ ಕಸಿಯಂತಹ ಮಹತ್ವದ ಶಸ್ತ್ರಚಿಕಿತ್ಸೆಗಳ ಜತೆಗೆ ಕ್ಯಾಲ್ಸಿಯಂ ಸ್ಕೋರಿಂಗ್, ಸಿಟಿ ಆಂಜಿಯೋ ಸಹ ಇಲ್ಲಿ ಮಾಡಲಾಗುತ್ತದೆ. ಸೂಪರ್ ಸ್ಪೆಷಾಲಿಟಿ ಶಾಖೆಗಳು, ತಜ್ಞ ವೈದ್ಯರ ತಂಡ, ನರ್ಸಿಂಗ್ ಸಿಬ್ಬಂದಿ ಇದ್ದಾರೆ. ಈ ಆಸ್ಪತ್ರೆಯು ವಿಶ್ವದರ್ಜೆಯ ಜೆಸಿಐ, ಎಎಚ್ಎ, ಎಎಸ್ಎ ಮಾನ್ಯತೆ, ರಾಷ್ಟ್ರಮಟ್ಟದ ಎನ್ಎಬಿಎಚ್, ಎನ್ಎಬಿಎಲ್ ಮಾನ್ಯತೆ ಹೊಂದಿದ್ದು, ನ್ಯೂಯಾರ್ಕ್ನ ಪ್ರಸಿದ್ಧ ಮೌಂಟ್ ಸಿನಾಯ್ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿದೆ.
ಒಂದು ದೇಶದ ನಿಜವಾದ ಸಂಪತ್ತು ಆ ದೇಶದ ಯುವ ಸಮುದಾಯ. ದೇಶದ ಭವಿಷ್ಯವನ್ನು ನಿರ್ವಿುಸುವ ಯುವ ಸಮುದಾಯವು ದುಶ್ಚಟ, ದುರಭ್ಯಾಸಗಳಿಂದಾಗಿ ಜೀವನವನ್ನು ಹಾನಿಗೊಳಿಸಿಕೊಳ್ಳುತ್ತಿದ್ದಾರೆ. ಧೂಮಪಾನ, ಜಂಕಫುಡ್ ಸೇವನೆ, ಅನಿಯಮಿತ ದಿನಚರಿ ಹೀಗೆ ಹಲವು ದೋಷಗಳಿಂದ ಸಮಸ್ಯೆಗಳಿಗೆ ತುತ್ತಾಗಿ ಹೃದಯಸಂಬಂಧಿ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಭಾರತ ಸೇರಿ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೇವಲ 30-40 ವರ್ಷ ವಯಸ್ಸಿನ ಯುವ ಸಮುದಾಯ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣ ಹೆಚ್ಚಾಗಿವೆ. ಎಲ್ಲ ಮುಂಜಾಗ್ರತೆಗಳನ್ನು ಪಾಲಿಸಿಯೂ ತಲೆದೋರುವ ಸಮಸ್ಯೆಗಳಿಗೆ ಸರಿಯಾದ ಪರೀಕ್ಷೆಯೊಂದಿಗೆ ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡಬೇಕು. ಅಂತಹ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಒಂದು ಹೆಜ್ಜೆ ಮುಂದಿದೆ.
ಬ್ಲಾಕೇಜ್ಗೆ ಆಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್ ಇತ್ಯಾದಿ ಚಿಕಿತ್ಸಾ ಸೌಕರ್ಯಗಳು ಇಲ್ಲಿವೆ. ಸ್ಟೆಂಟಿಂಗ್ನಲ್ಲಿ ಇಮೇಜಿಂಗ್ ಮಾಡುವುದರಿಂದ ನಿಖರವಾದ ಫಲಿತಾಂಶ ನೀಡಲು ಸಹಾಯವಾಗಲಿದೆ. ಇದು ಆಲ್ಟ್ರಾಸೌಂಡ್ ಚಿಕಿತ್ಸಾ ವಿಧಾನ (ಐವಿಯುಎಸ್). ಇದರಿಂದ ಮುಂದೆ 10-15 ವರ್ಷ ಬೈಪಾಸ್ ಸರ್ಜರಿಯ ಅವಶ್ಯಕತೆ ಇರುವುದಿಲ್ಲ. ಬಹಳಷ್ಟು ಜನರಲ್ಲಿ ಹಾರ್ಟ್ ಬೀಟ್ ವ್ಯತ್ಯಾಸವಿರುತ್ತದೆ. ಆ ಸಮಸ್ಯೆಗೆ ಕಾರ್ಡಿಯಾಕ್ ಎಲೆಕ್ಟ್ರೋ ಫಿಜಿಯಾಲಜಿ ಲ್ಯಾಬ್ನಲ್ಲಿ ನಿಖರವಾಗಿ ಹೃದಯ ಬಡಿತವನ್ನು ತಪಾಸಣೆಗೊಳಪಡಿಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹಾರ್ಟ್ ವಾಲ್ವ್ ಸ್ಟ್ರಕ್ಚರಲ್ ಸಮಸ್ಯೆ ಇರುವವರಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡಿ ಗುಣಪಡಿಸುವ ಅತ್ಯಾಧುನಿಕ ತಂತ್ರಜ್ಞಾನ ರಾಮಯ್ಯ ಆಸ್ಪತ್ರೆಯಲ್ಲಿದೆ. ಹೃದಯಬಡಿತಕ್ಕೆ ಸಂಬಂಧಪಟ್ಟ ದಿಢೀರ್ ಮೂರ್ಛೆ ಹೋಗುವ ಸಿಂಕೋಪ್ ಸಮಸ್ಯೆಗೆ ನಿಖರವಾಗಿ ಪರೀಕ್ಷೆ ನಡೆಸುವ ಯಂತ್ರಗಳಿವೆ. ಹಾಗೂ ಮೇಲಿನ ಎಲ್ಲ ಚಿಕಿತ್ಸೆ ಮತ್ತು ಪರೀಕ್ಷೆಗೆ ಸಂಬಂಧಪಟ್ಟ ತರಬೇತಿ ಪಡೆದಿರುವ ತಜ್ಞ ವೈದ್ಯರು ರಾಮಯ್ಯ ಆಸ್ಪತ್ರೆಯಲ್ಲಿದ್ದಾರೆ. ವಿಶ್ವ ಮೆಡಿಕಲ್ ಮಾರ್ಗದರ್ಶಿಯ ಪ್ರಕಾರ ಹೃದಯಾಘಾತ ಇತ್ಯಾದಿ ಹೃದಯಸಂಬಂಧಿ ಸಮಸ್ಯೆಗೆ 90 ನಿಮಿಷದೊಳಗೆ (ಸುವರ್ಣ ಸಮಯ) ಚಿಕಿತ್ಸೆ ನೀಡಬೇಕೆಂಬ ನಿಯಮವಿದೆ. ಆದರೆ, ರಾಮಯ್ಯ ಆಸ್ಪತ್ರೆಯಲ್ಲಿ ಅಂತಹ ತುರ್ತು ಸಂದರ್ಭದಲ್ಲಿ ಕೇವಲ 70 ನಿಮಿಷದೊಳಗೆ ಆಂಜಿಯೋಪ್ಲಾಸ್ಟಿ, ಡೋರ್ ಟು ಬಲೂನ್, ಬ್ಲಾಕೇಜ್ ಕ್ಲಿಯರ್ ಮಾಡುವ ಮೂಲಕ ಜೀವ ಉಳಿಸುವ ಕಾರ್ಯ ದಿನನಿತ್ಯ ನಡೆಯುತ್ತವೆ.
21ನೇ ಶತಮಾನದಲ್ಲಿ ಎಲ್ಲರೂ ಒತ್ತಡದ ಜೀವನದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರ ಜತೆಗೆ ಅತಿಯಾದ ತಂಬಾಕು ಸೇವನೆ, ಜಂಕ್ಫುಡ್ ಸೇವನೆಯಿಂದ ಸ್ಥೂಲದೇಹವನ್ನು ಹೊಂದುತ್ತಿದ್ದಾರೆ. ಈ ನಡುವೆ ಮಧುಮೇಹ, ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆಯಿಂದ ಹೃದಯಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಕಂಡುಬರುವುದರಿಂದ ಹೃದಯವೈಫಲ್ಯ ಉಂಟಾಗಿ ಪ್ರಾಣಹಾನಿಯಾಗುತ್ತಿವೆ. ವಯೋಭೇದವಿಲ್ಲದೆ ಕೇವಲ 30-40 ವಯಸ್ಸಿನವರು ಸಹ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಬ್ಬಿನಾಂಶ ಇರುವ ಆಹಾರ ಸೇವನೆಯನ್ನು ಕಡಿಮೆ ಮಾಡುವುದು, ಕಾಬೋಹೈಡ್ರೇಟ್ ಸೇವನೆ ನಿಯಂತ್ರಿಸುವುದು, ಮಧುಮೇಹ, ಬಿ.ಪಿ. ನಿಯಂತ್ರಣ ಹಾಗೂ ನಿಯಮಿತ ವ್ಯಾಯಾಮದೊಂದಿಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಎಲ್ಲ ಮುಂಜಾಗ್ರತೆಯ ಹೊರತಾಗಿಯೂ ಹೃದಯಸಂಬಂಧಿ ಗಂಭೀರ ಸಮಸ್ಯೆಗಳು ಕಂಡುಬಂದಾಗ ಕಡಿಮೆ ಅವಧಿಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಅತ್ಯಗತ್ಯ. ಅಂತಹ ಎಲ್ಲ ಆಧುನಿಕ ಚಿಕಿತ್ಸೆಗಳು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ಲಭ್ಯವಿವೆ.
ರಾಮಯ್ಯ ಆಸ್ಪತ್ರೆಯಲ್ಲಿ ಹೈರಿಸ್ಕ್ ಪ್ರಕರಣಗಳನ್ನು ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಹೃದಯದ ಪ್ರಮುಖ ರಕ್ತನಾಳದ ಸರ್ಜರಿ, ಮಿನಿ ಕಾರ್ಡಿಯಾಕ್ ಸರ್ಜರಿ, ಚಿಕ್ಕ ಹೋಲ್ ಮೂಲಕ ಹಾರ್ಟ್ ವಾಲ್ವ್ ಬದಲಿಸುವುದು, ಹೃದಯದಲ್ಲಿ ಉಂಟಾದ ರಂಧ್ರ ಮುಚ್ಚುವುದು ಸೇರಿ ಇನ್ನೂ ಅನೇಕ ಹೈ ರಿಸ್ಕ್ ಪ್ರಕರಣಗಳಿಗೆ ಯಶಸ್ವಿ ಚಿಕಿತ್ಸೆಗೆ ಬೇಕಾದ ಎಲ್ಲ ಆಧುನಿಕ ಯಂತ್ರಗಳಿವೆ. ಅರೋಟಿಕ್ ಸರ್ಜರಿ ವೇಳೆ ರೋಗಿಯ ದೇಹದ ಉಷ್ಣಾಂಶವನ್ನು 18ರಿಂದ 20 ಡಿಗ್ರಿಗೆ ತಗ್ಗಿಸಿ ಶಸ್ತ್ರಚಿಕಿತ್ಸೆ ಮಾಡುವುದು, ತೊರೊಕೋ ಅಬ್ಡಾಮಿನಲ್ ಸರ್ಜರಿ ವೇಳೆ ರಕ್ತನಾಳವನ್ನು ಬದಲಾಯಿಸಲು 10-12 ಗಂಟೆಗಳ ಸರ್ಜರಿ ಮಾಡುವುದು ದೊಡ್ಡ ಸವಾಲು. ಈ ಸರ್ಜರಿಯಲ್ಲಿ ಎದೆಯಿಂದ ತೊಡೆಯವರೆಗಿನ ಮುಖ್ಯ ರಕ್ತನಾಳ ಹಾಗೂ ಅದರ ಕವಲುಗಳನ್ನು ಬದಲಾಯಿಸಲಾಗುವುದು. ಇನ್ನು ಹೃದಯದ ಕಸಿ, ಕೃತಕ ಡಿವೈಸ್ಗಳನ್ನು ಅಳವಡಿಸಿ ಪ್ರಾಣಹಾನಿಯನ್ನು ತಪ್ಪಿಸುವ ಹಲವು ರೀತಿಯ ಚಿಕಿತ್ಸೆಗಳು ನಿರಂತರವಾಗಿ ನಡೆಯುತ್ತವೆ. ಪ್ರಮುಖವಾಗಿ ಹೃದಯದ ರಕ್ತನಾಳಗಳು ಸೀಳಿಕೊಂಡಾಗ ಜೀವಹಾನಿಯಾಗುವ ಸಂದರ್ಭ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಮೂಲಕ ಪ್ರಾಣ ಉಳಿಸಲು ಬೇಕಾದ ಅತ್ಯಾಧುನಿಕ ಎಂಡೋವ್ಯಾಸ್ಕ್ಯೂಲರ್ ಸೌಲಭ್ಯ ಕೂಡ ರಾಮಯ್ಯ ಆಸ್ಪತ್ರೆಯಲ್ಲಿದೆ.
ಮಕ್ಕಳಲ್ಲಿ ಹೃದ್ರೋಗಕ್ಕೆ ಹಲವು ಕಾರಣಗಳಿದ್ದು, ಪ್ರಮುಖವಾಗಿ ಕಂಡು ಬರುವಂತಹದ್ದು ಜನ್ಮಜಾತ ಹೃದಯ ಕಾಯಿಲೆ (ಸಿಎಚ್ಡಿ). ಮಕ್ಕಳಲ್ಲಿ ಬರುವ ಈ ಕಾಯಿಲೆಗೆ ಶೇ. 95 ನಿಖರ ಕಾರಣ ತಿಳಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಆಂಟೆನಟಲ್ ಫೀಟಲ್ ಎಕೋ ಮೂಲಕ ಶಿಶು ಗರ್ಭದಲ್ಲಿ ಇರುವಾಗಲೇ ಶೇ. 70-80 ಸಮಸ್ಯೆಗಳನ್ನು ತಿಳಿಯಬಹುದಾಗಿದೆ. ಈ ಜನ್ಮಜಾತ ಹೃದಯ ಕಾಯಿಲೆ ಹೃದಯದ ರಚನೆಯ ಸಮಸ್ಯೆಯಾಗಿದೆ. ಇದರಲ್ಲಿ ರಕ್ತವು ಸಾಮಾನ್ಯವಾಗಿ ಹರಿಯದಂತೆ ತಡೆಯುವ ಸಮಸ್ಯೆ. ಹೃದಯ ಗೋಡೆಯಲ್ಲಿ ರಂಧ್ರ, ರಕ್ತನಾಳದಲ್ಲಿ ಸಮಸ್ಯೆ ಅಂದರೆ ತಪ್ಪಾದ ದಿಕ್ಕಿನಲ್ಲಿ ರಕ್ತ ಹರಿಯುವುದು, ರಕ್ತದ ಹರಿವನ್ನು ನಿಯತ್ರಿಸುವ ಹೃದಯದ ಕವಾಟಗಳಲ್ಲಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಕೆಲವು ಪ್ರಕರಣಗಳು ಸರಳವಾಗಿದ್ದು, ರೋಗ ಲಕ್ಷಣಗಳು ಗೋಚರಿಸುವುದಿಲ್ಲ. ಕೆಲವು ಆಪಾಯಕಾರಿಯೂ ಆಗಿರುತ್ತವೆ. ಅಂತಹವುಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇರುತ್ತದೆ. ಮಕ್ಕಳ ಹೃದಯದಲ್ಲಿ ರಂಧ್ರ ಸಾಮಾನ್ಯ ಸಮಸ್ಯೆಯಾಗಿದ್ದು, ಇದರಲ್ಲಿ ಮೂರು ವಿಧ. ಏಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ಎಎಸ್ಡಿ), ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ (ವಿಎಸ್ಡಿ) ಮತ್ತು ಅಟ್ರಿಯೊವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ (ಪಿಡಿಎ). ಜೋರಾದ ಉಸಿರಾಟ, ಆಹಾರ ಸೇವಿಸದಿರುವುದು, ಕೊರಗುವುದು ಇತ್ಯಾದಿ ಮಕ್ಕಳಲ್ಲಿ ಕಂಡುಬರುವ ಹೃದ್ರೋಗ ಲಕ್ಷಣಗಳಾಗಿವೆ.
ಎಕೋ ಕಾರ್ಡಿಯೋಗ್ರಾಮ್ ಮೂಲಕ ಸಮಸ್ಯೆ ಪತ್ತೆ ಮಾಡಲಾಗುತ್ತದೆ. ಕೆಲ ತಿಂಗಳೊಳಗೆ ಓಪನ್ ಸರ್ಜರಿ ಇಲ್ಲವೆ ಕ್ಯಾಟ್ ಹೀಟರ್ ಅಥವಾ ಸ್ಪೆಷಲ್ ಡಿವಿಸ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವು ಮಕ್ಕಳಿಗೆ 4-5 ವರ್ಷಗಳಲ್ಲಿ ಚಿಕಿತ್ಸೆ ಮಾಡಬೇಕಾಗುತ್ತದೆ. ಬ್ಲೂ ಬೇಬಿ ಸಿಂಡ್ರೋಮ್ ಇದು ಸಹ ಶಿಶುಗಳಲ್ಲಿ ಕಂಡುಬರುವ ಹೃದಯ ಸಮಸ್ಯೆಗಳಲ್ಲಿ ಒಂದು. ಇದರಿಂದ ಶಿಶುವಿನ ಚರ್ಮ ನೀಲಿ ಅಥವಾ ನೇರಳ ಬಣ್ಣಕ್ಕೆ ತಿರುಗುವ ಸ್ಥಿತಿ. ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಇದು ಸಂಭವಿಸುತ್ತದೆ. ಜನ್ಮಜಾತ ಹೃದಯ ದೋಷಗಳಲ್ಲಿ ಇದೂ ಒಂದು. ಇದನ್ನು ಟೆಟ್ರಾಲಜಿ ಎಂಬುದಾಗಿಯೂ ಕರೆಯಲಾಗುತ್ತದೆ. ಈ ಹಂತದಲ್ಲಿ ಶಿಶುವಿನ ಮೈಬಣ್ಣ ನೀಲಿ ಆಗಿರುತ್ತದೆ. ಆಲಸ್ಯ, ತ್ವರಿತ ಹೃದಯ ಬಡಿತ, ಉಸಿರಾಟದ ತೊಂದರೆ, ದೀರ್ಘಕಾಲ ಅಳುವುದು, ಕಿರಿಕಿರಿ, ಕಡಿಮೆ ತೂಕ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಡೆಂಘ ಜ್ವರ ಸಹ ಮಕ್ಕಳ ಹೃದಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದು ಹಾರ್ಟ್ ಫೇಲ್ಯೂರ್ಗೂ ಕಾರಣವಾಗುತ್ತದೆ. ಆಗ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಡೆಂಘಯಿಂದ ಬರುವ ಹೃದಯ ಕಾಯಿಲೆಯಲ್ಲಿ ಶೇ.80-90 ಮಕ್ಕಳು ಗುಣಮುಖರಾಗುತ್ತಾರೆ.
ಎಕೋಕಾರ್ಡಿಯಾಕ್ ಎಂದರೆ ಅಲ್ಟ್ರಾಸೌಂಡ್ ತಂತ್ರಜ್ಞಾನದಿಂದ ಹೃದಯ ಚಿತ್ರಗಳನ್ನು ತೆಗೆಯುವ ಪರೀಕ್ಷೆ. ಇದು ಮಕ್ಕಳ ಹೃದಯ ಆರೋಗ್ಯ ತಪಾಸಣೆಯಲ್ಲಿ ಎರಡನೇ ಸ್ಟಥಾಸ್ಕೋಪ್ ರೀತಿ ಕಾರ್ಯನಿರ್ವಹಿಸುತ್ತದೆ. ಎಕೋ ಕಾರ್ಡಿಯಾಗ್ರಾಮ್ ಎಂಬುದು ಹೃದಯದ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ವ್ಯವಸ್ಥೆಯಾಗಿದ್ದು, ಇದು ಹೃದಯದ ಅಲ್ಟ್ರಾಸೌಂಡ್ ಪರೀಕ್ಷೆಯಾಗಿದೆ. ಪೀಡಿಯಾಟ್ರಿಕ್ ಮಯೋಕಾಡೈಟಿಸ್ ಇದು ಹೃದಯ ಸ್ನಾಯುವಿನ ಗಾಯ, ಉರಿಯೂತ ಅಥವಾ ರಕ್ತದ ಹರಿವಿನ ಕೊರತೆ ಸೇರಿ ಹೃದಯದ ಸಾಮಾನ್ಯ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸಲು ಬಳಸಲಾಗುತ್ತದೆ.
ಹೃದ್ರೋಗ ಕುರಿತು ಉದಾಸೀನ ಹಾಗೂ ಅರಿವಿನ ಕೊರತೆಯಿಂದಾಗಿ ಹೆಂಗಸರಲ್ಲಿ ಶೇ. 50 ಸಮಸ್ಯೆಗಳು ಕಂಡುಬರುತ್ತಿವೆ. ಆದರೆ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಬಗ್ಗೆ ಇತ್ತೀಚೆಗೆ ಅರಿವು ಮೂಡುತ್ತಿದ್ದು, ಅಂತಹವರು ಮುನ್ನೆಚ್ಚರಿಕೆಯಾಗಿ ಹೃದಯದ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಬದಲಾದ ಜೀವನಶೈಲಿ, ಆಹಾರ ಕ್ರಮ, ಮಧುಮೇಹ, ಅಧಿಕ ರಕ್ತದೊತ್ತಡ, ಒತ್ತಡ, ಸ್ಥೂಲಕಾಯ ಇವು ಮಹಿಳೆಯರಲ್ಲಿ ಹೃದಯ ಕಾಯಿಲೆಗೆ ಗಮನಾರ್ಹ ಅಪಾಯಕಾರಿ ಅಂಶಗಳಾಗಿವೆ. ವಿಶೇಷವಾಗಿ ಋತುಬಂಧನ ನಂತರ ದೇಹದ ಹಾಮೋನುಗಳ ಸಮತೋಲನದಲ್ಲಿನ ವ್ಯತ್ಯಾಸದಿಂದಾಗಿ ಮಹಿಳೆಯರಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಿದೆ. ಹಾಗಾಗಿ ಮಹಿಳೆಯರು ಜೀವನಶೈಲಿಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆರೋಗ್ಯಕರ ಆಹಾರ ಸೇವನೆ ಹಾಗೂ ಚಟುವಟಿಕೆಗೆ ಆದ್ಯತೆ ನೀಡಬೇಕು. ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಬೇಕು.
ಮಹಿಳೆಯರ ಹೆಲ್ತಿ ಹಾರ್ಟ್ ಕ್ಲಿನಿಕ್: ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯು ವಿಶೇಷವಾದ ಹೃದ್ರೋಗ ವಿಭಾಗ ಹೊಂದಿದ್ದು, ಇಲ್ಲಿ ಮಹಿಳೆಯರಿಗಾಗಿ ‘ಹೆಲ್ತಿ ಹಾರ್ಟ್ ಕ್ಲಿನಿಕ್’ ತೆರೆಯಲಾಗಿದೆ. ಇಲ್ಲಿ ಮಹಿಳೆಯರಿಗೆ ನಿರ್ದಿಷ್ಟವಾದ ಹೃದಯ ಆರೋಗ್ಯ ಸಮಸ್ಯೆ, ಕಾರಣ, ಲಕ್ಷಣ ಮತ್ತು ಚಿಕಿತ್ಸೆ ಹಾಗೂ ಎಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಸೇರಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ, ಹೃದಯ ವೈಫಲ್ಯ ಆದವರಿಗೆ ಫಾಲೋಅಪ್ ಮಾಡಲಾಗುತ್ತದೆ.
ಹಾರ್ಟ್ ಟ್ರಾನ್ಸ್ಪ್ಲಾಂಟ್ ಪ್ರೋಗ್ರಾಂ: ರಾಮಯ್ಯ ಆಸ್ಪತ್ರೆಯು ಹೃದಯ ಕಸಿ ಕಾರ್ಯಕ್ರಮ (ಹಾರ್ಟ್ ಟ್ರಾನ್ಸ್ಪ್ಲಾಂಟ್ ಪ್ರೋಗ್ರಾಂ) ಆರಂಭಿಸಿದೆ. ಪ್ರತಿ ಬುಧವಾರ ಈ ಕಾರ್ಯಕ್ರಮ ನಡೆಯಲಿದ್ದು, ಕಾರ್ಡಿಯೋಥೋರಾಸಿಕ್ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು ಸೇರಿ ಹೃದಯ ತಜ್ಞರ ತಂಡವು ಈ ಕಾರ್ಯಕ್ರಮ ನಡೆಸಿಕೊಡಲಿದೆ. ಯಾವ ಕಾರಣದಿಂದ ಹೃದಯಾಘಾತವಾಗಿದೆ, ಹಾರ್ಟ್ ಪಂಪಿಂಗ್ ಎಷ್ಟಿದೆ, ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ ಕಾರ್ಯವಿಧಾನ ಹೀಗೆ ಹೃದಯ ಕಸಿಗೆ ಒಳಗಾಗುವ ರೋಗಿಯ ಸಂಪೂರ್ಣ ಆರೋಗ್ಯ ಪರೀಕ್ಷೆ ಹಾಗೂ ಚಿಕಿತ್ಸಾ ಕ್ರಮದ ಕುರಿತು ಮಾಹಿತಿ ನೀಡಲಾಗುವುದು. ಇದಲ್ಲದೆ ಒಟ್ಟಾರೆ ಶಸ್ತ್ರಚಿಕಿತ್ಸೆಯ ಮೊದಲು ಹಾಗೂ ನಂತರ ರೋಗಿಗಳನ್ನು ದೈಹಿಕವಾಗಿ ಮತ್ತು ಮಾನಸಿಕ ಹಾಗೂ ಭಾವನಾತ್ಮಕವಾಗಿ ಬೆಂಬಲಿಸಲು ಆಸ್ಪತ್ರೆಯು ಹೃದಯ ಪುನರ್ವಸತಿ ಕಾರ್ಯಕ್ರಮವನ್ನೂ ನಡೆಸುತ್ತದೆ.
ಹಾರ್ಟ್ ಫೇಲ್ಯೂರ್ ಮ್ಯಾನೇಜ್ವೆುಂಟ್: ಹಾರ್ಟ್ ಪಂಪಿಂಗ್ ಕಡಿಮೆ ಅಥವಾ ಸಹಜವಾಗಿದ್ದವರಲ್ಲೂ ಹಾರ್ಟ್ ಫೇಲ್ಯೂರ್ ಆಗಬಹುದು. ಹಾರ್ಟ್ ಅಟ್ಯಾಕ್ ಅದವರಲ್ಲಿ ಇದು ಹೆಚ್ಚು. ಉಸಿರಾಟದ ತೊಂದರೆ, ಕಾಲಿನಲ್ಲಿ ಊತ, ಸುಸ್ತು ರೋಗ ಲಕ್ಷಣಗಳು. ಇಸಿಜಿ, ಎಕೋ, ರಕ್ತ ಪರೀಕ್ಷೆಗಳ ಮೂಲಕ ಪತ್ತೆ ಹೆಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಈ ಹಂತದಲ್ಲಿ ಸಿಆರ್ಟಿ ಡಿವೈಸ್ ಅಳವಡಿಸಬಹುದು. ಇದು ಉಪಯೋಗ ಆಗದಿದ್ದರೆ, ಔಷಧವೂ ಕೆಲಸ ಮಾಡಿದ್ದರೆ ವೆಂಟ್ರಿಕ್ಯೂಲರ್ ಅಸಿಸ್ಟ್ ಡಿವೈಸ್ (ವಿಎಡಿ) ಹಾಕಬಹುದಾಗಿದೆ. ಚಿಕಿತ್ಸಾ ಮಾನದಂಡಗಳಿಗೆ ರೋಗಿಯ ದೇಹ ಸ್ಪಂದಿಸಿದರೆ ಇದನ್ನು ಅಳವಡಿಸಬಹುದು. ಆದರೆ ಇದು ದೀರ್ಘಕಾಲ ಉಪಯೋಗ ಆಗದು. ಯಾರಿಗೆ ಹೃದಯ ಕಸಿ ಅನಿವಾರ್ಯ ಇರುತ್ತದೋ ಅಂತಹವರಿಗೆ ಹೃದಯ ಸಿಗುವವರೆಗೂ ರೋಗಿಯ ಆರೋಗ್ಯವನ್ನು ಸ್ಥಿರವಾಗಿರಿಸಲು ಇದನ್ನು ಹಾಕಲಾಗುತ್ತದೆ. ಬಳಿಕ ಹೃದಯ ಕಸಿ ಮಾಡಲಾಗುತ್ತದೆ.
ರಾಮಯ್ಯದಲ್ಲಿ ಕಾರ್ಡಿಯಾಕ್ ಎಲೆಕ್ಟ್ರೋ ಫಿಜಿಯಾಲಜಿ ಹಾರ್ಟ್ ಫೇಲ್ಯೂರ್ ಮ್ಯಾನೇಜ್ವೆುಂಟ್ ಸೌಲಭ್ಯವಿದೆ. ಹೃದಯದಲ್ಲಿ ರಕ್ತ ಸಂಚಾರದ ಜತೆಗೆ ಎಲೆಕ್ಟ್ರಿಕಲ್ ಆಕ್ಟಿವೇಟಿವ್ (ವಿದ್ಯುತ್ ಪ್ರಚೋದನೆ) ಸಹ ಬೇಕಾಗುತ್ತದೆ. ಇದು ದೇಹದಾದ್ಯಂತ ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡಲು ನೆರವಾಗುತ್ತದೆ. ಈ ವಿದ್ಯುತ್ ಸಂಕೇತಗಳಿಗೆ ಅಡ್ಡಿ ಉಂಟಾದಾಗ ಅರೆಥ್ಮಿಯಾ ಆಗುತ್ತದೆ. ಈ ಹಂತದಲ್ಲಿ ಹೃದಯದಬಡಿತ ಕಡಿಮೆ ಅಥವಾ ಹೆಚ್ಚಾಗಬಹುದು. ಆಗ ಇಸಿಜಿ ಮಾಡಿ ಸಮಸ್ಯೆ ಪತ್ತೆಹಚ್ಚಲು ರಾಮಯ್ಯದಲ್ಲಿ ದಿನದ 24 ಗಂಟೆಗಳ ಇಸಿಜಿ ರೆಕಾರ್ಡಿಂಗ್ ವ್ಯವಸ್ಥೆ ಇದೆ. ಎಲೆಕ್ಟ್ರಿಕಲ್ ಆಕ್ಟಿವೇಟಿವ್ ಸರಿಯಾಗಿ ಆಗದಿದ್ದಾಗ ಬ್ಲಾಕೇಜ್ ತಿಳಿದು, ಎಲೆಕ್ಟ್ರಿಕಲ್ ಆಕ್ಟಿವೇಟಿವ್ ನಿಧಾನವಾಗಿದ್ದರೆ ರೋಗಿಯ ವಯಸ್ಸಿಗೆ ಅನುಗುಣವಾಗಿ ಪೇಸ್ವೆುೕಕರ್ ಹಾಕಲಾಗುತ್ತದೆ. ಇದು ಹಾರ್ಟ್ಬೀಟ್ ಅನ್ನು ಚೆಕ್ ಮಾಡುತ್ತದೆ. ಸಾಮಾನ್ಯವಾಗಿ ವಿಶ್ರಾಂತಿ ಹಂತದಲ್ಲಿದ್ದಾಗ ಹಾರ್ಟ್ ಬೀಟ್ 60- 80 ಇರುತ್ತದೆ. ಅದಕ್ಕಿಂತ ಕಡಿಮೆ ಆದರೆ, ಈ ಪೇಸ್ವೆುೕಕರ್ ಹಾರ್ಟ್ಗೆ ಸೂಚನೆ ನೀಡಿ ಎಲೆಕ್ಟ್ರಿಕಲ್ ಆಕ್ಟಿವೇಟಿವ್ ಆಗಿ ಹೃದಯ ಸಮಪರ್ಕವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಹಾರ್ಟ್ ಅಟ್ಯಾಕ್ ಆದವರಿಗೆ ಸ್ನಾಯುವಿನ ಜೀವ ಹೋಗಿ, ಅಲ್ಲಿ ಕಾರ್ ಟಿಶ್ಯು ಫೋರ್ವ ಆಗಿರುತ್ತದೆ. ಇದರಿಂದ ಅನಿಯಂತ್ರಿತವಾಗಿ ಎಲೆಕ್ಟ್ರಿಕಲ್ ಆಕ್ಟಿವೇಟಿವ್ ಆಗಿ ಹೃದಯಬಡಿತ ವೇಗವಾಗುತ್ತದೆ. ಆಗ ರೋಗಿ ಪ್ರಜ್ಞೆ ತಪ್ಪಿ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ (ಐಸಿಡಿ) ಅಳವಡಿಸಲಾಗುತ್ತದೆ. ರೋಗಿಯ ಹಾರ್ಟ್ ಬೀಟ್ ವೇಗಗೊಂಡಾಗ ಅಲರ್ಟ್ ಆಗಿ ಶಾಕ್ ಕೊಟ್ಟು ಸಹಜ ಸ್ಥಿತಿಗೆ ತರುತ್ತದೆ. ಹಾರ್ಟ್ನ ರೈಟ್ ವೆಂಟ್ರಿಕಲ್ ಹಾಗೂ ಲೆಫ್ಟ್ ವೆಂಟ್ರಿಕಲ್ ಎರಡೂ ಒಟ್ಟಿಗೆ ಕಾರ್ಯನಿರ್ವಹಿಸಬೇಕು. ಆದರೆ, ಎಲೆಕ್ಟ್ರಿಕಲ್ ಆಕ್ಟಿವೇಟಿವ್ ಸಮಸ್ಯೆಯಿಂದ ಈ ಎರಡೂ ಒಟ್ಟಿಗೆ ಕೆಲಸ ಮಾಡದಿದ್ದಾಗ ಹಾರ್ಟ್ ಪಂಪಿಂಗ್ ಕಡಿಮೆ ಆಗುತ್ತದೆ. ಆಗ ಕಾರ್ಡಿಯಾಕ್ ರೀಸಿಂಕ್ರೋನೈಸೇಶನ್ ಥೆರಪಿ (ಸಿಆರ್ಟಿ) ಡಿವೈಸ್ ಹಾಕಲಾಗುತ್ತದೆ. ಇದು ಹಾರ್ಟ್ನ ಎರಡೂ ವೆಂಟ್ರಿಕಲ್ ಒಟ್ಟಿಗೆ ಕೆಲಸ ಮಾಡಲು ನೆರವಾಗಿ ಹಾರ್ಟ್ ಪಂಪಿಂಗ್ ಸುಧಾರಿಸುತ್ತದೆ. ಎಲೆಕ್ಟ್ರೋಫಿಸಿಯಾಲಜಿ ಸ್ಟಡಿ (ಇಪಿಎಸ್) ಮತ್ತು ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ (ಆರ್ಎಫ್ಎ) ಅಂದರೆ ರೋಗಿಗೆ ಟಾಕಿ ಅರೆಥ್ಮಿಯಾ ಬಂದಾಗ ಹೃದಯದ ನಾಲ್ಕೂ ಚೇಂಬರ್ನಲ್ಲಿ ಯಾವ ಕಡೆಯಿಂದಲಾದರೂ ಎಲೆಕ್ಟ್ರಿಕಲ್ ಆಕ್ಟಿವೇಟಿವ್ ಆಗಬಹುದು. ಆಗ ಹಾರ್ಟ್ಬೀಟ್ ಜೋರಾಗಿ ರೋಗಿಗೆ ತಲೆ ಸುತ್ತ ಸೇರಿ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಪಿಎಸ್ ಮೂಲಕ ಹೃದಯದ ವಿದ್ಯುತ್ ಸಂಕೇತಗಳನ್ನು ಮತ್ತು ಅಸಹಜ ಹೃದಯಬಡಿತ ಕಾರಣ ಗುರುತಿಸಿ, ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಚಿಕಿತ್ಸೆ ನೀಡಲಾಗುತ್ತದೆ.
ಪ್ರಸ್ತುತ ಜಗತ್ತಿನಲ್ಲಿ ಹೃದಯ ಕಾಯಿಲೆಯು ಅತ್ಯಂತ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಎಲ್ಲಾ ವಯೋಮಾನದ ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಆದಾಗ್ಯೂ, ಇದು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೃದಯಕ್ಕೆ ಸಂಬಂಧಿಸಿದ ವಿವಿಧ ಪರಿಸ್ಥಿತಿಗಳಲ್ಲಿ, ಪರಿಧಮನಿಯ ಅಪಧಮನಿ ಕಾಯಿಲೆ (ಸಿಎಡಿ) ಹೆಚ್ಚು ಪ್ರಚಲಿತವಾಗಿದೆ. ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಗಳು ಕೊಬ್ಬಿನ ಪದಾರ್ಥಗಳ ಶೇಖರಣೆಯಿಂದಾಗಿ ಕಿರಿದಾದಾಗ ಅಥವಾ ನಿರ್ಬಂಧಿಸಲ್ಪಟ್ಟಾಗ ಇದು ಸಂಭವಿಸುತ್ತದೆ. ಪರಿಣಾಮವಾಗಿ, ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಎದೆ ನೋವು, ಉಸಿರಾಟದ ತೊಂದರೆ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಹೃದಯಾಘಾತದಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಹೃದಯ ಕಾಯಿಲೆಯ ಬೆಳವಣಿಗೆಗೆ ಹಲವಾರು ಅಂಶಗಳು ಕೊಡುಗೆ ನೀಡುತ್ತವೆ ಅವುಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ದೈಹಿಕ ಚಟುವಟಿಕೆಯ ಕೊರತೆ ಪ್ರಮುಖವಾದವು.
ಈ ಅಪಾಯಕಾರಿ ಅಂಶಗಳಲ್ಲಿ ಎರಡು ಅಥವಾ ಮೂರು ಇದ್ದರೂ ಸಹ, ಹೃದಯ ಕಾಯಿಲೆ ಬರುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಇವುಗಳಲ್ಲಿ, ಮಧುಮೇಹವು ವಿಶೇಷವಾಗಿ ಅಪಾಯಕಾರಿ, ಏಕೆಂದರೆ ಇದು ಹೃದಯವನ್ನು ಮಾತ್ರವಲ್ಲದೆ ಮೂತ್ರಪಿಂಡಗಳು, ಕಣ್ಣುಗಳು ಮತ್ತು ನರಗಳ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಜಾಗೃತಿ ಮತ್ತು ಜೀವನಶೈಲಿಯ ಶಿಸ್ತಿನ ಮೂಲಕ ಮಧುಮೇಹವನ್ನು ತಡೆಗಟ್ಟುವುದು ಮತ್ತು ಒಟ್ಟಾರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಹೃದಯ ಕಾಯಿಲೆ ಮತ್ತು ಮಧುಮೇಹವನ್ನು ಹೆಚ್ಚಾಗಿ ತಡೆಗಟ್ಟಬಹುದು. ಧೂಮಪಾನ ತ್ಯಜಿಸುವುದು, ಸಮತೋಲಿತ ಆಹಾರ ಸೇವಿಸುವುದು, ದೇಹದ ತೂಕವನ್ನು ನಿರ್ವಹಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಒತ್ತಡವನ್ನು ಕಡಿಮೆ ಮಾಡುವುದು ಇವೆಲ್ಲವೂ ಪ್ರಮುಖ ಅಂಶಗಳಾಗಿವೆ.
ಆಹಾರದಲ್ಲಿ ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಪಾಲಕ್ನಂತಹ ಸೊಪ್ಪುಗಳನ್ನು ಸೇರಿಸಬೇಕು, ಎಣ್ಣೆಯಲ್ಲಿ ಕರಿದ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸುವುದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚುರುಕಾದ ನಡಿಗೆ, ಯೋಗ ಅಥವಾ ಕ್ರೀಡೆಗಳಂತಹ ನಿಯಮಿತ ದೈಹಿಕ ಚಟುವಟಿಕೆಗಳು ಹೃದಯ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸಹ ಸರಿಯಾದ ವೈದ್ಯಕೀಯ ಸಲಹೆಯನ್ನು ಅನುಸರಿಸುವುದ ಜತೆಗೆ ಸೂಚಿಸಲಾದ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಆರೋಗ್ಯಕರ ಮತ್ತು ಸಕ್ರಿಯ ಜೀವನವನ್ನು ನಡೆಸಬಹುದು. ಒತ್ತಡವನ್ನು ನಿರ್ವಹಿಸುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವುದು ಸಹ ಹೃದಯ ಆರೋಗ್ಯಕ್ಕೆ ನಿರ್ಣಾಯಕವಾಗಿದೆ.