

ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾಯ ಫಲಿತಾಂಶ ಕುರಿತು ಬಹುತೇಕ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಕಾಂಗ್ರೆಸ್ಗೆ ಹೀನಾಯ ಸೋಲಾಗಿದೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕದಲ್ಲಿ ಆಗಲೇ ಅಧಿಕಾರ ಹಿಡಿದೇ ಬಿಟ್ಟಿದ್ದೀವಿ ಅನ್ನೋ ಹೇಗೆ ಕರ್ನಾಟಕದಲ್ಲಿ ಜೆಡಿಎಸ್ ಅನ್ನು ನಾಶ ಮಾಡ್ತೀವಿ ಎಂದು ಹೊರಟ ಕಾಂಗ್ರೆಸ್ಸಿಗರಿಗೆ ಈ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ ಕೊಟ್ಟಿದೆ ಎಂದರು.
ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಚುನಾವಣೆ ಫಲಿತಾಂಶವೇ ನಮಗೆ ಸ್ಫೂರ್ತಿ. ಗೋವಾ, ಉತ್ತರಾಖಂಡ್ನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಅಲ್ಲಿ ಯಾರೂ ನಾಯಕರಿಲ್ಲ ಎಂಬಂತೆ ಕರ್ನಾಟಕದ ಸೂತ್ರಧಾರಿಗಳನ್ನು ಕರೆಸಿಕೊಳ್ಳಲಿಲ್ಲವೇ? ಈಗ ಏನಾಯ್ತು ನೋಡಿ? ಎಂದು ಡಿಕಿಶಿ ವಿರುದ್ಧ ಎಚ್ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದರು.