ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

haveri covid ward
Published on

ಹಾವೇರಿ: ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಭಯಾನಕ ಘಟನೆ ಸಂಭವಿಸಿದ್ದು, ರೋಗಿಗಳು ಭಯದಿಂದ ಓಡಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋವೀಡ್ ಸೆಂಟರ್​ನಲ್ಲೇ ಕರೊನಾ ಸೋಂಕಿತ ವ್ಯಕ್ತಿಯೊಬ್ಬ ಬಾಗಿಲ ಬಳಿ ಲುಂಗಿಯಿಂದ ನೇಣುಬಿಗಿದುಕೊಂಡು ಒದ್ದಾಡುತ್ತ ಪ್ರಾಣ ಬಿಟ್ಟಿದ್ದು, ಶವ ನೋಡಿದ ಮತ್ತೊಬ್ಬ ರೋಗಿ ಕಕ್ಕಾಬಿಕ್ಕಿಯಾಗಿ ನೀರು ಕುಡಿದಿದ್ದಾನೆ. ಒಬ್ಬರಿಗೊಬ್ಬರು ಗಾಬರಿಗೊಂಡ ಸೋಂಕಿತರು ಆ ವಾರ್ಡ್​ನಿಂದ ಓಡಿ ಹೋಗಿದ್ದಾರೆ. ಈ ದೃಶ್ಯ ಸೆರೆಯಾಗಿದೆ.

ಯಲ್ಲಪ್ಪ ಲಮಾಣಿ (70) ಆತ್ಮಹತ್ಯೆ ಮಾಡಿಕೊಂಡವ. ರಾಣೆಬೇನ್ನೂರು ತಾಲೂಕಿನ ಗಂಗಾಜಲ ತಾಂಡದ ನಿವಾಸಿಯಾಗಿದ್ದ ಯಲ್ಲಪ್ಪ, ಕರೊನಾ ಸೋಂಕು ತಗುಲಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೇ 5ರಂದು ಹಾವೇರಿ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ ವೃದ್ಧ ಸಾವಿನ ಮನೆಯ ಕದ ತಟ್ಟಿದ್ದು, ಇವರೊಟ್ಟಿಗೆ ಇದ್ದ ಕರೊನಾ ಸೋಂಕಿತರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಹಾವೇರಿ ಶಹರ ಸಿಪಿಐ ಪ್ರಹ್ಲಾದ್ ಚನ್ನಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net