ಮತ್ತೆ ಟ್ರೋಲ್ ಆದ ಚಂದನ್-ನಿವೇದಿತಾ! ಸೋತು ಹಾಗಲಕಾಯಿ ತಿಂದ ಪತ್ನಿ, ಗೆದ್ದು ಆ್ಯಪಲ್​ ತಿಂದ ಪತಿ

chandan nivedita
Published on

ಬೆಂಗಳೂರು: ತಾರಾ ದಂಪತಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಮಾಡುತ್ತಿರುವ ರೀಲ್ಸ್ ಸಖತ್ ವೈರಲ್ ಆಗುತ್ತಿವೆ. ಚಂದನ್ ಮುಂದೆ ಟವೆಲ್ ತೆಗೆದು ಪ್ರ್ಯಾಂಕ್ ಮಾಡಿದ್ದ ರೀಲ್ಸ್ ವೈರಲ್ ಆದ ಬೆನ್ನಲ್ಲೇ, ಈಗ ಅವರ ಮತ್ತೊಂದು ವಿಡಿಯೋ ವೈರಲ್ ಆಗ್ತಿದೆ.

ಗಂಡ-ಹೆಂಡತಿ ಇಬ್ಬರೂ ಹ್ಯಾಂಡ್ ಕ್ರಿಕೆಟ್ ಆಡಿದ್ದು, ಇದರಲ್ಲಿ ಸೋತವರು ಹಾಗಲಕಾಯಿ, ಗೆದ್ದವರು ಆ್ಯಪಲ್ ತಿನ್ನಬೇಕೆಂಬ ಪಂದ್ಯ ಹಾಕಿಕೊಂಡು ಗೇಮ್ ಆಡಿದ್ದಾರೆ. ನಿವೇದಿತಾ ಸೋತು ಹಾಗಲಕಾಯಿ ತಿಂದಿದ್ದು, ಹೆಂಡತಿಯನ್ನು ಸೋಲಿಸಿ ಚಂದನ್ ಶೆಟ್ಟಿ ಆ್ಯಪಲ್ ತಿಂದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net