ಹಾನಗಲ್​, ಸಿಂದಗಿ ಕ್ಷೇತ್ರಗಳ ಉಪ ಸಮರ: ಚುರುಕು ಪಡೆದ ಮತದಾನ

New Project (10)
Published on

ಬೆಂಗಳೂರು: ಹಾನಗಲ್​ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಮತದಾನ ಶನಿವಾರ ಬೆಳಗ್ಗೆ 7ಕ್ಕೆ ಆರಂಭವಾಗಿದ್ದು, ಸಂಜೆ 7ಕ್ಕೆ ಮುಗಿಯಲಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮತದಾರರ ನಾಡಿಮಿಡಿತ ತಿಳಿಯುವ ಚುನಾವಣೆ ಎಂದೇ ವಿಶ್ಲೇಷಣೆಗೊಳಪಟ್ಟಿದ್ದ ಈ ಎರಡು ಕ್ಷೇತ್ರಗಳ ಫಲಿತಾಂಶ ಘಟಾನುಟಿ ನಾಯಕರ ಹಣೆಬರಹವನ್ನೂ ನಿರ್ಧರಿಸಲಿದೆ.

ಹಾನಗಲ್​ ಕ್ಷೇತ್ರದಲ್ಲಿ ಒಟ್ಟು 263 ಮತಗಟ್ಟೆಗಳಲ್ಲಿ ಬೆಳಗ್ಗೆ 11ರ ವೇಳೆಗೆ ಶೇ.24.31ರಷ್ಟು ಮತದಾನ ಆಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕಾಗಿ 239 ಮೂಲ ಹಾಗೂ 24 ಹೆಚ್ಚುವರಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಿಂದಗಿಯಲ್ಲಿ 297 ಮತಕೇಂದ್ರ ಸ್ಥಾಪಿಸಲಾಗಿದ್ದು, ಬೆಳಗ್ಗೆ 11ರ ವರೆಗೆ ಶೇ.26.75ರಷ್ಟು ಮತದಾನವಾಗಿದೆ.


ಹಾನಗಲ್​, ಸಿಂದಗಿಯಲ್ಲಿನ ಗೆಲುವು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ನಿರ್ಣಾಯಕವಾಗಿದೆ. ಈ ಎರಡೂ ಕ್ಷೇತ್ರಗಳನ್ನು ಗೆದ್ದು ತಮ್ಮ ನಾಯಕತ್ವ ಸಾಬೀತುಪಡಿಸುವ ಅನಿವಾರ್ಯತೆ ಸಿಎಂ ಗೆ ಎದುರಾಗಿದೆ. ಹೀಗಾಗಿಯೇ ಎರಡೂ ಕ್ಷೇತ್ರಗಳಲ್ಲಿ 10 ದಿನ ಬೀಡುಬಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಸಿದ್ದರಾಮಯ್ಯ, ಯಡಿಯೂರಪ್ಪ, ಡಿ.ಕೆ. ಶಿವಕುಮಾರ್, ಎಚ್​.ಡಿ. ದೇವೇಗೌಡ, ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಘಟಾನುಘಟಿಗಳು ಕ್ಷೇತ್ರದಲ್ಲಿ ಬೀಡುಬಿಟ್ಟು ಅಬ್ಬರದ ಪ್ರಚಾರ ನಡೆಸಿದ್ದರು. ಬಿಜೆಪಿ ಹೋಬಳಿಗೊಬ್ಬ ಸಚಿವರನ್ನು ನಿಯೋಜಿಸಿತ್ತು.

ಅದೃಷ್ಟ ಪರೀಕ್ಷೆಯಲ್ಲಿ ಇರುವ ಅಭ್ಯರ್ಥಿಗಳು
ಸಿಂದಗಿ
ಬಿಜೆಪಿ- ರಮೇಶ್​ ಭೂಸನೂರ
ಕಾಂಗ್ರೆಸ್​- ಅಶೋಕ್​ ಮನಗೂಳಿ
ಜೆಡಿಎಸ್​- ಅಂಗಡಿ ನಾಜಿಯಾ

ಹಾನಗಲ್​
ಬಿಜೆಪಿ- ಶಿವರಾಜ ಶರಣಪ್ಪ ಸಜ್ಜನರ
ಕಾಂಗ್ರೆಸ್​- ಮಾನೆ ಶ್ರೀನಿವಾಸ
ಜೆಡಿಎಸ್​- ನಿಯಾಶ್​ ಶೇಖ್​

ಸಿಂದಗಿ ಕ್ಷೇತ್ರದ ಮತ ಎಣಿಕೆ ವಿಜಯಪುರದ ಸೈನಿಕ ಶಾಲೆಯಲ್ಲಿ ಹಾಗೂ ಹಾನಗಲ್​ ಕ್ಷೇತ್ರದ ಎಣಿಕೆ ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್​ ಕಾಲೇಜಿನಲ್ಲಿ ನ.2ರಂದು ನಡೆಯಲಿದೆ.

https://www.vijayavani.net/a-puneeth-rajkumar-heart-attack-cardiacarrest-sandalwood-appu-fans-try-to-death/

https://www.vijayavani.net/r-puneeth-rajkumar-heart-attack-cardiac-arrest-sandalwood-hospital-bombe-helutaite-raajakumara/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net