ಎ.ಎಚ್.ವಿಶ್ವನಾಥ್​ ಸಚಿವರಾಗುವ ಕನಸ್ಸು ಭಗ್ನ! ಆರ್.ಶಂಕರ್, ಎಂಟಿಬಿ ನಾಗರಾಜ್​ಗೆ ಬಿಗ್​ ರಿಲೀಫ್​

vishwnath
Published on

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆ ಹೆಚ್ಚುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಶ್ವನಾಥ್​ಗೆ ಹೈ ಕೋರ್ಟ್​ ಆದೇಶ ಬಿಗ್​ ಶಾಕ್​ ನೀಡಿದೆ. ಸಚಿವರಾಗುವ ಹಂಬಲದಲ್ಲಿದ್ದ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ನ್ಯಾಯಾಲಯ ಆದೇಶಿಸಿದೆ.

ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ಎ.ಎಚ್​.ವಿಶ್ವನಾಥ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈ ಕೋರ್ಟ್​ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಇನ್ನುಳಿದಂತೆ ಆರ್​. ಶಂಕರ್​ ಮತ್ತು ಎಂಟಿಬಿ ನಾಗರಾಜ್​ರನ್ನು ಅರ್ಹರು ಎಂದು ಪರಿಗಣಿಸಲಾಗಿದೆ. ಇವರಿಬ್ಬರು ಸಂವಿಧಾನದಡಿಯಲ್ಲಿ ಮರು ಆಯ್ಕೆಯಾಗಿರುವುದರಿಂದಾಗಿ ಅನರ್ಹರಾಗಿಲ್ಲ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net