ಬಸವ ಜಯಂತಿಯಲ್ಲಿ ಗುಂಡ್ಲುಪೇಟೆ ಶಾಸಕರಿಂದ ನಂದಿಧ್ವಜ ಕುಣಿತ: ವಿಡಿಯೋ ವೈರಲ್​

New Project(29)
Published on

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅವರು ನಂದಿಧ್ವಜ ಹೊತ್ತು ಕುಣಿಯುತ್ತಾ ನೆರೆದಿದ್ದ ಸಹಸ್ರಾರು ಜನರ ಗಮನಸೆಳೆದರು. ಶಾಸಕರ ಈ ನೃತ್ಯದ ದೃಶ್ಯ ವೈರಲ್​ ಆಗಿದೆ.

ಜಾನಪದ ಕಲೆಯಾದ ನಂದಿಧ್ವಜ/ ನಂದಿಕೋಲು ಕುಣಿತಕ್ಕೆ ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚಿ ಪ್ರಾಶಸ್ತ್ಯ ಇದೆ. ಸಮಾರು 50-70 ಕೆಜಿ ತೂಕ ಇರುವ ನಂದಿಕೋಲು 20-25 ಅಡಿ ಎತ್ತರ ಇರುತ್ತೆ. ಈ ನಂದಿಧ್ವಜ ಕುಣಿತ ಮಾಡಬೇಕಾದರೆ ವ್ಯಕ್ತಿಗೆ ಏಕಾಗ್ರತೆ ಮುಖ್ಯ. ಕುಣಿತದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಹಾಗಾದದಲ್ಲಿ ಮಾತ್ರ ನಂದಿಧ್ವಜ ಎತ್ತಿ ಕುಣಿಯಲು ಸಾಧ್ಯ ಎನ್ನುವ ಸಾರ್ವಜನಿಕರು, ಶಾಸಕರ ನಂದಿಕೋಲು ಕುಣಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಂಡ್ಲುಪೇಟೆ ಶಾಸಕರೂ ಆಗಿರುವ ನಿರಂಜನ್ ಕುಮಾರ್, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರೂ ಆಗಿದ್ದಾರೆ.

ಗುಂಡ್ಲುಪೇಟೆಯಲ್ಲಿ ಬಸವಣ್ಣರ ಭಾವಚಿತ್ರ ಮೆರವಣಿಗೆ ವೇಳೆ ಜಾನಪದ ಕಾಲತಂಡಗಳು ಮೆರುಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net