ಬಾವಿಗೆ ಬಿದ್ದ ಮೊಮ್ಮಗಳನ್ನು ರಕ್ಷಿಸಿದ ಅಜ್ಜಿ!

WELL
Published on

ಕಾಸರಗೋಡು: ಆಯತಪ್ಪಿ ಬಾವಿಗೆ ಬಿದ್ದ ಮೂರು ವರ್ಷದ ಮೊಮ್ಮಗಳನ್ನು ರಕ್ಷಿಸುವ ಮೂಲಕ ಆಕೆಯ ಅಜ್ಜಿ ಸಾಹಸ ಮೆರೆದಿದ್ದಾರೆ.

ಇಂತಹ ಘಟನೆ ಕಳ್ಳಾರ್​ ಅಡ್ಕದಲ್ಲಿ ಶನಿವಾರ ಸಂಜೆ ಸಂಭವಿಸಿದ. ಮನೆ ಬಳಿ ಆಟವಾಡುತ್ತಿದ್ದ ಕಳ್ಳಾರ್​ ಅಡ್ಕ ನಿವಾಸಿ ಲೀಲಮ್ಮ(56) ಅವರ ಮೊಮ್ಮಗಳು ಆಕಸ್ಮಿಕವಾಗಿ ಬಾವಿಗೆ ಬಿದ್ದಳು. ಇದನ್ನು ಕಂಡ ಲೀಲಮ್ಮ ತಕ್ಷಣ ಬಾವಿಗೆ ಧುಮುಕಿ, ಮಗುವನ್ನು ಎತ್ತಿ ಬಾವಿಯೊಳಗೆ ಮೋಟಾರ್​ಗೆ ಅಳವಡಿಸಿದ ಪೈಪನ್ನು ಹಿಡಿದು ನಿಂತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕುತ್ತಿಕೋಲ್​ನಿಂದ ಕಳ್ಳಾರ್​ ಅಡ್ಕಗೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಅಜ್ಜಿ-ಮೊಮ್ಮಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಾವಿಯಲ್ಲಿ ಅಲ್ಪ ಪ್ರಮಾಣದ ನೀರಿದ್ದ ಕಾರಣ ಹೆಚ್ಚಿನ ಅಪಾಯ ಉಂಟಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net