ಧರ್ಮಾಪುರದಲ್ಲಿ ಅದ್ದೂರಿ ಮೆರವಣಿಗೆ

Dharmapura eed milad 1
ಧರ್ಮಾಪುರ ಸಮೀಪದ ರತ್ನಪುರಿ ಗ್ರಾಮದಲ್ಲಿ ಗುರುವಾರ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂರು ಮೆರವಣಿಗೆ ನಡೆಸಿದರು.
Published on

ಧರ್ಮಾಪುರ: ಗ್ರಾಮದಲ್ಲಿ ಗುರುವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ಧರ್ಮಾಪುರ ಸಮೀಪದ ಮುಖ್ಯ ರಸ್ತೆಯಲ್ಲಿರುವ ಮಸೀದಿಯಿಂದ ಮುಸ್ಲಿಮರು ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿದರು. ಪರಸ್ಪರ ಸಿಹಿ ಹಂಚಿ ಶುಭಾಶಯ ಕೋರಿದರು.

ಅಲಂಕೃತ ಕಾರು, ಬೈಕ್ ಹಾಗೂ ಗೂಡ್ಸ್ ವಾಹನಗಳು ಗಮನ ಸೆಳೆದವು. ತಾಪಂ ಮಾಜಿ ಸದಸ್ಯ ಅಜ್ಗರ್ ಪಾಷ, ಗ್ರಾಪಂ ಅಧ್ಯಕ್ಷೆ ಮುಬಾರಕ್ ಭಾನು, ರಫೀಕ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net