ಗದ್ದೆಗೆ ಹೋಗುತ್ತಿದ್ದ ವೃದ್ಧೆ ಮೇಲೆ ಹಂದಿ ದಾಳಿ, ಒಂದು ವಾರ ಜೀವನ್ಮರಣ ಹೋರಾಟ ನಡೆಸಿದ್ರೂ ಬದುಕಲಿಲ್ಲ ಅಜ್ಜಿ

death
Published on

ಉಡುಪಿ: ಕೋಟ ಸಮೀಪದ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಕುದ್ರುಮನೆಬೆಟ್ಟು ಪ್ರದೇಶದಲ್ಲಿ ಹಂದಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

ಕಮಲಾ ದೇವಾಡಿಗ (80) ಮೃತರು. ವಾರದ ಹಿಂದೆ ಭತ್ತದ ಗದ್ದೆ ವೀಸಲು ತೆರಳುತ್ತಿದ್ದ ಕಮಲಾ ಮೇಲೆ ಕಾಡು ಹಂದಿ ದಾಳಿ ಮಾಡಿತ್ತು. ದೇಹದ ಹೆಚ್ಚಿನ ಭಾಗಗಳ ಮೂಳೆ ಮುರಿದು ಕಮಲಾ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲೇ ಕಮಲಾ ಮೃತಪಟ್ಟಿದ್ದಾರೆ.

ಹಂದಿ ಉಪಟಳದಿಂದ ಕೃಷಿ ಬೆಳೆ ಹಾಗೂ ಜನರಿಗೆ ಭಾರಿ ಹಾನಿಯುಂಟಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿ ಇಲಾಖೆಯನ್ನು ಎಚ್ಚರಿಸಿದರೂ ಹಂದಿ ಹಾವಳಿ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದೀಗ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸ್ಥಳೀಯರಿಗೆ ಹಂದಿ ಉಪಟಳದಿಂದ ಮುಕ್ತಿ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net