ಊಗಿನಹಳ್ಳಿಯಲ್ಲಿ ಅದ್ದೂರಿ ಹನುಮಂತೋತ್ಸವ

05-kkr1(5-25 Hanumanta utsava uginahalli
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ಹನುಮಂತೋತ್ಸವ ಭಾನುವಾರ ಜರುಗಿತು.
Published on

ಕಿಕ್ಕೇರಿ : ಹೋಬಳಿಯ ಗಡಿಭಾಗವಾದ ಊಗಿನಹಳ್ಳಿ ಗ್ರಾಮದಲ್ಲಿ ಕುರುಹಿನಶೆಟ್ಟಿ ನೇಕಾರ ಸಮುದಾಯದವರು ಭಾನುವಾರ ಸಂಭ್ರಮ ಸಡಗರದಿಂದ ಶ್ರೀ ರಾಮದೇವರ ಪಟ್ಟಾಭಿಷೇಕ ಹಾಗೂ ಹನುಮಂತೋತ್ಸವ ಆಚರಿಸಿದರು.

ಹನುಮದೇವರ ಭಾವಚಿತ್ರಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ರಾಮಮಂದಿರದಲ್ಲಿ ಅಗ್ರಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯ, ಬಾಣಬಿರುಸಿನೊಂದಿಗೆ ಮೆರವಣಿಗೆ ಮಾಡಲಾಯಿತು. ರಾಮಮಂದಿರದಿಂದ ಸಾಗಿದ ಉತ್ಸವಕ್ಕೆ ಗ್ರಾಮಸ್ಥರು ಹಣ್ಣು, ಕಾಯಿ ಅರ್ಪಿಸಿ ಆರತಿ ಬೆಳಗಿದರು. ನಂತರ ಮೂಲ ರಾಮಮಂದಿರ ಗುಡಿಗೆ ಉತ್ಸವ ಸಾಗಿತು. ದೇವಿಗೆ ಅಂತಿಮವಾಗಿ ಮಹಾಮಂಗಳಾರತಿ ಬೆಳಗಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ತೀರ್ಥ ಪ್ರಸಾದ, ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ಮನೆಯ ಮುಂದೆ ಇಡಲಾಗಿದ್ದ ಬಣ್ಣದ ನೀರು, ಬಣ್ಣದ ಪುಡಿಯನ್ನು ಮೆತ್ತಿಕೊಂಡು, ಬೇರೆಯವರಿಗೂ ಬಳಿದು ಚಿಣ್ಣರು ಸಂಭ್ರಮಿಸಿದರು. ಇವರೊಂದಿಗೆ ಹಿರಿಯರು, ಯುವಕರು ಸಾಥ್ ನೀಡಿದರು.

ಮುಖಂಡರಾದ ಕೆಇಬಿ ತಿಮ್ಮಶೆಟ್ಟಿ, ಮುರಳೀಧರ್, ಜೇನುಗೂಡು ಮಹೇಶ್, ಮುತ್ತುಶೆಟ್ಟಿ, ಕೃಷ್ಣಶೆಟ್ಟಿ, ನ್ಯಾಯಬೆಲೆ ತಿಮ್ಮಶೆಟ್ಟಿ, ರೂಪೇಶ್, ನಂಜುಂಡಶೆಟ್ಟಿ, ಕೇಶವಶೆಟ್ಟಿ, ಎಚ್. ಮಂಜುನಾಥ, ಶ್ರೀರಾಮ ಗೆಳೆಯರ ಬಳಗದ ಹರೀಶ್, ಗಿರೀಶ್, ದೀಪು, ವೆಂಕಟೇಶ್, ಹೇಮಂತ್, ವರದರಾಜು, ಯಶ್ವಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net