ಅತ್ತೆ ಮನೆಗೆ ಬಂದವಳು ಮರುದಿನವೇ ಹೆಣವಾದಳು; ಅಮ್ಮ-ಮಗನದೇ ಕೈವಾಡವೆಂದ ಪಾಲಕರು

Girl 17 June 20
Published on

ಧಾರವಾಡ: ಅಪ್ರಾಪ್ತೆಯೋರ್ವಳ ಮೃತದೇಹ ಆಕೆಯ ಅತ್ತೆಮನೆಯಲ್ಲಿ ಸಿಕ್ಕಿದ್ದು, ಸಾವಿನ ಬಗ್ಗೆ ಸಂಶಯ ಶುರುವಾಗಿದೆ.

ನರೇಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀ ಭಜಂತ್ರಿ (16) ಮೃತ ಬಾಲಕಿ. ಈಕೆ ಸವದತ್ತಿ ತಾಲೂಕಿನ ಸತ್ತಗೇರಿ ಗ್ರಾಮದ ಮಾರುತಿ-ಹನುಮವ್ವ ದಂಪತಿಯ ಪುತ್ರಿ.

ಈಕೆ ನಿನ್ನೆಯಷ್ಟೇ ನರೇಂದ್ರ ಗ್ರಾಮದಲ್ಲಿರುವ ಅತ್ತೆ ಶಾಂತಾ ಅವರ ಮನೆಗೆ ಬಂದಿದ್ದಳು. ಶಾಂತಾ ಅವರ ಮಗ ಭೀಮೇಶಿಯೇ ಲಕ್ಷ್ಮೀಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ಹೋಗಿ ಮರುದಿನವೇ ಆಕೆಯ ಸಾವಿನ ಸುದ್ದಿ ಕೇಳಿಬಂದಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮದುವೆ ವಿಚಾರದಲ್ಲಿ ಎರಡೂ ಕುಟುಂಬಗಳ ಭಿನ್ನಾಭಿಪ್ರಾಯ ಇತ್ತು ಎಂದು ಹೇಳಲಾಗಿದೆ. ಇದೀಗ ಬಾಲಕಿಯ ತಂದೆ ತಾಯಿ, ಶಾಂತಾ ಮತ್ತು ಭೀಮೇಶಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಅವರೇ ಲಕ್ಷ್ಮೀಯನ್ನು ಕೊಂದಿದ್ದಾರೆ ಎಂದು ಧಾರವಾಡ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net