ಅತ್ತಿಗೆ ಮೇಲೆ ಕಣ್ಣು ಹಾಕಿದ್ದ ಗೆಳೆಯನ ಪ್ರಾಣ ತೆಗೆದ ಸ್ನೇಹಿತ

crijme
Published on

ಬೆಳಗಾವಿ: ಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹುಲ್ಯಾನೂರ ಗ್ರಾಮದಲ್ಲಿ ನಡೆದಿದೆ.

ಅಭಿಷೇಕ್ ಬುಡ್ರಿ(19) ಕೊಲೆಯಾದ ಯುವಕ. ಹುಲ್ಲೆಪ್ಪಾ ಕರೀಕಟ್ಟಿ ಕೊಲೆ ಮಾಡಿದ ಆರೋಪಿ. ಮಹಿಳೆ ಮೇಲೆ ಕಣ್ಣು ಹಾಕಿ ಅದೇ ಗ್ರಾಮದ ಸ್ನೇಹಿತ ಹುಲ್ಲೆಪ್ಪಾ ಕರೀಕಟ್ಟಿಯಿಂದ ಅಭಿಷೇಕ್ ಬುಡ್ರಿ ಹತ್ಯೆಯಾಗಿದ್ದಾನೆ.

ನಡೆದಿದ್ದೇನು?: ಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನನ್ನು ಕೊಲೆ ಮಾಡಲು ಹುಲ್ಲೆಪ್ಪಾ ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ. ಆ.9ರಂದು ರಾತ್ರಿ ಬರ್ತಡೇ ಪಾರ್ಟಿ ಇದೆ ಅಂತಾ ಅಭಿಷೇಕ್ ಬುಡ್ರಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಕೊಲೆಗೆ ಸ್ಕೇಚ್​ ಹಾಕಿದ್ದಾನೆ.

ಅಭಿಷೇಕ್ ಬುಡ್ರಿಗೆ ಚಾಕುವಿನಿಂದ ಇರಿದು ಹುಲ್ಲೆಪ್ಪಾ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಬುಡ್ರಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಹುಲ್ಲೆಪ್ಪಾನನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net