ಮಾಜಿ ಸಚಿವ ಎಂ.ವಿ.ಕೃಷ್ಣಪ್ಪರ ಪತ್ನಿ, ಸ್ವಾತಂತ್ರ್ಯ ಹೋರಾಟಗಾರ್ತಿ ಪ್ರಮೀಳಮ್ಮ ನಿಧನ

pramilamma
Published on

ಕೋಲಾರ: ಕೇಂದ್ರದ ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಧರ್ಮಪತ್ನಿ, ಸ್ವಾತಂತ್ರ್ಯ ಹೋರಾಟಗಾರ್ತಿ ಪ್ರಮೀಳಮ್ಮ(95) ನಿಧನರಾದರು.

ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಮೀಳಮ್ಮ, ಬೆಂಗಳೂರಿನ ಸ್ವಗೃಹದಲ್ಲಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದು, ಇಂದು ಸಂಜೆ ಸ್ವಗ್ರಾಮ ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿಯ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಪುತ್ರರಾದ ಅಶೋಕ್ ಕೃಷ್ಣಪ್ಪ ಮತ್ತು ಜಯಸಿಂಹ ಕೃಷ್ಣಪ್ಪ ತಿಳಿಸಿದ್ದಾರೆ.

ಹೈನೋದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ ಎಂ.ವಿ.ಕೃಷ್ಣಪ್ಪರ ಸಾಧನೆಯಲ್ಲಿ ಪತ್ನಿ ಪ್ರಮಿಳಮ್ಮರ ಪಾತ್ರ ಬಹುಮುಖ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕೃಷ್ಣಪ್ಪರ ಜತೆ ಭಾಗಿಯಾಗಿದ್ದ ಪ್ರಮೀಳಮ್ಮ ಹಲವು ಭಾರಿ ಜೈಲಿಗೂ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net