ಫುಡ್​ ಆರ್ಡರ್​​ ಕಂಪನಿಗೆ ವಂಚಿಸಿ 2 ವರ್ಷಗಳಲ್ಲಿ 21 ಲಕ್ಷ ರೂ.ಆಹಾರ ಸೇವನೆ ಮಾಡಿದ ವ್ಯಕ್ತಿ! | Food Order

Bbau (25)
Published on

ಜಪಾನ್​: ಜಪಾನ್‌ನ ಪ್ರಸಿದ್ಧ ಆಹಾರ ವಿತರಣಾ(Food Order) ಅಪ್ಲಿಕೇಶನ್ ಡೆಮೇ-ಕ್ಯಾನ್ ಅನ್ನು ಬಳಸಿಕೊಂಡು ಅಲ್ಲಿನ ನಗೋಯಾದ ವ್ಯಕ್ತಿಯೊಬ್ಬ ಎರಡು ವರ್ಷಗಳ ಕಾಲ ಒಂದೇ ಒಂದು ಪೈಸೆಯನ್ನೂ ಪಾವತಿಸದೆ ದುಬಾರಿ ಆಹಾರವನ್ನು ಆರ್ಡರ್​ ಮಾಡಿ ಸೇವನೆ ಮಾಡಿದ್ದಾನೆ ಎಂದು ಸೌತ್​ ಮಾರ್ನಿಂಗ್​ ಪೋಸ್ಟ್ ವರದಿ ಮಾಡಿದೆ.

ಹೌದು, ಟಕುಯಾ ಹಿಗಾಶಿಮೊಟೊ ಎಂಬ ಹೆಸರಿನ ವ್ಯಕ್ತಿ ಎರಡು ವರ್ಷಗಳಲ್ಲಿ ಕಂಪನಿಗೆ ಸುಮಾರು ಸುಮಾರು 3.7 ಮಿಲಿಯನ್ ಯೆನ್ (ಸುಮಾರು 21 ಲಕ್ಷ ರೂ.) ಮೌಲ್ಯದ ಊಟವನ್ನು ಆರ್ಡರ್ ಮಾಡಿದ್ದಾನೆ. ಅಲ್ಲದೆ, ಕಂಪನಿಗೆ 21 ಲಕ್ಷ ರೂ. ವಂಚನೆ ಮಾಡಿದ್ದಾನೆ.

ಆತ ಸ್ಕ್ಯಾಮ್ ಮಾಡಿದ್ದೇಗೆ?

ಹಲವು ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಟಕುಯಾ,2 ವರ್ಷಗಳ ಕಾಲ ಡೆಮಾ-ಕ್ಯಾನ್ ಅಪ್ಲಿಕೇಶನ್ ಬಳಸಿ ಪ್ರತಿದಿನ ಈಲ್ ಬೆಂಟೊ, ಹ್ಯಾಂಬರ್ಗರ್ ಸ್ಟೀಕ್ ಮತ್ತು ಐಸ್ ಕ್ರೀಮ್‌ನಂತಹ ದುಬಾರಿ ಭಕ್ಷ್ಯಗಳನ್ನು ಆರ್ಡರ್ ಮಾಡುತ್ತಿದ್ದರು.

ಪ್ರತಿ ಬಾರಿ ವಿತರಣೆಯಾದ ನಂತರವೂ, ತನ್ನ ಆರ್ಡರ್ ಬಂದಿಲ್ಲ ಎಂದು ಅವನು ದೂರುತ್ತಿದ್ದ. ಪರಿಣಾಮವಾಗಿ, ಕಂಪನಿಯು ಅವನಿಗೆ ಪೂರ್ಣ ಮೊತ್ತವನ್ನು ಮರುಪಾವತಿಸುತ್ತಿತ್ತು, ಅವನಿಗೆ ಆಹಾರ ಮತ್ತು ಹಣವನ್ನು ಹಿಂದಿರುಗಿಸುತ್ತಿತ್ತು. ಎರಡು ವರ್ಷಗಳಲ್ಲಿ, ಇದು ಕಂಪನಿಗೆ 3.7 ಮಿಲಿಯನ್ ಯೆನ್ (ಸುಮಾರು 21 ಲಕ್ಷ ರೂ.) ನಷ್ಟಕ್ಕೆ ಕಾರಣವಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಟಕುಯಾ 124 ನಕಲಿ ಖಾತೆಗಳನ್ನು ಸೃಷ್ಟಿಸಿದನು, ಪ್ರತಿಯೊಂದೂ ಹೊಸ ಹೆಸರು, ವಿಭಿನ್ನ ವಿಳಾಸ ಮತ್ತು ನಕಲಿ ದಾಖಲೆಗಳೊಂದಿಗೆ ಪಡೆದ ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಹೊಂದಿದ್ದನು.ಆದಾಗ್ಯೂ, ಅವನ ಮೋಸದ ಕ್ರಮಗಳು ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಜು.30ರಂದು ಅವನು ಮತ್ತೆ ಐಸ್ ಕ್ರೀಮ್ ಮತ್ತು ಚಿಕನ್ ಸ್ಟೀಕ್ ಅನ್ನು ಆರ್ಡರ್ ಮಾಡಿ ಮರುಪಾವತಿಯನ್ನು ಕೋರಿದಾಗ ಕಂಪನಿಯು ಅನುಮಾನಿಸಿತು.

ಅನುಮಾನದ ನಂತರ, ತನಿಖೆ ಪ್ರಾರಂಭವಾಯ್ತು ಟಕುಯಾ ಆ್ಯಪ್‌ನ ಮರುಪಾವತಿ ನೀತಿಯನ್ನು 1,095 ಬಾರಿ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಂಪನಿಯು ಕೂಡಲೇ ಪೊಲೀಸ್ ಪ್ರಕರಣವನ್ನು ದಾಖಲಿಸಿದೆ. ಇದು ಆತನ ಬಂಧನಕ್ಕೆ ಕಾರಣವಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net