ನಟ ಚಂದನ್ ಮೇಲೆ ತೆಲುಗು ಧಾರಾವಾಹಿ ಚಿತ್ರೀಕರಣ ಸ್ಥಳದಲ್ಲಿ ಹಲ್ಲೆ! ವಿಡಿಯೋ ವೈರಲ್​

1315299
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ, ಕಿರುತೆರೆ ನಟ ಚಂದನ್ ಮೇಲೆ ಶೂಟಿಂಗ್​ ಸ್ಥಳದಲ್ಲೇ ಹಲ್ಲೆ ನಡೆದಿದೆ.

ಕನ್ನಡದ 'ರಾಧಾ ಕಲ್ಯಾಣ', 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಂದನ್​ ಕುಮಾರ್​, ಸಿನಿಮಾ, ರಿಯಾಲಿಟಿ ಶೋಗಳಲ್ಲೂ ಫೇಮಸ್​ ಆಗಿದ್ದಾರೆ. 'ಶ್ರೀಮತಿ ಶ್ರೀನಿವಾಸ್​' ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದನ್, ಹೈದರಾಬಾದ್​ನಲ್ಲಿ ಚಿತ್ರೀಕರಣಕ್ಕೆ ತೆರಳಿದ್ದರು. ಈ ವೇಳೆ ತೆಲುಗು ಸೀರಿಯಲ್​ ತಂತ್ರಜ್ಙರ ಜತೆ ಕಿರಿಕ್​ ಆಗಿದ್ದು, ಚಂದನ್​ಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಯಾವ ಕಾರಣಕ್ಕೆ ಚಂದನ್​ ಮೇಲೆ ಹಲ್ಲೆ ಆಗಿದೆ ಎಂಬುದು ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಆದರೆ, ಗಲಾಟೆ ಆಗುತ್ತಿರುವ, ಹಲ್ಲೆ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಕ್ಯಾಮರಮನ್​ ಮೇಲೆ ಚಂದನ್​ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಗಲಾಟೆ ನಡೆದಿದ್ದು, ಚಂದನ್​ ಕ್ಷಮೆ ಕೇಳಿದರೂ ಪರಿಸ್ಥಿತಿ ತಣ್ಣಗಾಗಿಲ್ಲ. ಕೈ ಮಿಲಾಯಿಸಿದ್ದಾರೆ.

ಕಿರುತೆರೆಗಳಲ್ಲಿ ಮಾತ್ರವಲ್ಲ ಹಿರಿತೆರೆಯಲ್ಲೂ ಚಂದನ್​ ಬಣ್ಣ ಹಚ್ಚಿದ್ದಾರೆ. ಪ್ರೇಮ ಬರಹ, ಲವ್​ ಯೂ ಆಲಿಯಾ ಸಿನಿಮಾದಲ್ಲೂ ಚಂದನ್​ ನಟಿಸಿದ್ದಾರೆ. ಬಿಗ್​ಬಾಸ್​ ಸೀಸನ್​-3ರಲ್ಲೂ ಚಂದನ್​ ಸ್ಪರ್ಧಿಸಿದ್ದರು.

ತೆಲುಗು ಧಾರಾವಾಹಿ ಸೆಟ್​ನಲ್ಲಿ ಚಂದನ್​ ಮೇಲೆ ಜು.31ರಂದು ಹಲ್ಲೆ ನಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net