ಪಾಸ್​​ಪೋರ್ಟ್ ಸಂಬಂಧ ಜಗಳ; ಮಗಳ ಮುಂದೆಯೇ ಪತ್ನಿ ಮೇಲೆ ಗುಂಡು ಹಾರಿಸಿ ಕೊಲೆಗೈದ ಪತಿ| Murder

ವಿಜಯವಾಣಿ (16)
Published on

Murder: ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಡನೆ ಪಾಸ್​ಪೋರ್ಟ್​ಗಾಗಿ ನಡೆದ ಜಗಳದ ವೇಳೆ ತನ್ನ ಅಪ್ರಾಪ್ತ ಮಗಳ ಮುಂದೆಯೇ 45 ವರ್ಷದ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಮಂಗಳವಾರ(ಅ. 14) ವರದಿಯಾಗಿದೆ.

ನಂದಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ನಾರಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿಕಾಸ್ ಸೆಹ್ರಾವತ್ 48 ತನ್ನ 11 ವರ್ಷದ ಮಗಳು ನವ್ಯಾ ಸಮ್ಮುಖದಲ್ಲೇ ಪತ್ನಿ ರೂಬಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಾತನಾಡಿರುವ ಎಸಿಪಿ ಉಪಾಸನಾ ಪಾಂಡೆ, ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿದೆ. ಕೋಣೆಯಲ್ಲಿ ಚದುರಿಹೋಗಿದ್ದ ವಸ್ತುಗಳಿಂದ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸೆಹ್ರಾವತ್ ಕುಡಿತದ ಚಟ ಹೊಂದಿದ್ದು, ಕಳೆದ ಒಂದು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಮಂಗಳವಾರ ಬೆಳಿಗ್ಗೆ ತನ್ನ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್ ಪಡೆಯಲು ಫ್ಲಾಟ್‌ಗೆ ಭೇಟಿ ನೀಡಿದ್ದ. ಈ ವೇಳೆ ಪತ್ನಿ ರೂಬಿ ನಡುವೆ ಜಗಳ ನಡೆದಿದ್ದು, ಕೋಪದಿಂದ ಅವಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net